Publish Date: Mon, 08 Jul 2024 (12:08 IST)
Updated Date: Mon, 08 Jul 2024 (12:10 IST)
ಮುಂಬೈ: ಬಾಲಿವುಡ್ ನ ಖ್ಯಾತ ನಟ ರಿತೇಶ್ ದೇಶ್ ಮುಖ್-ಜೆನಿಲಿಯಾ ಡಿಸೋಜಾ ದಂಪತಿ ತಮ್ಮ ಸಾವಿನ ಬಳಿಕ ಅಂಗಾಂಗ ದಾನ ಮಾಡುವ ಘೋಷಣೆ ಮಾಡಿದ್ದಾರೆ. ಸೆಲೆಬ್ರಿಟಿ ದಂಪತಿಯ ಈ ನಿರ್ಧಾರಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.
ರಿತೇಶ್ ಮತ್ತು ಜೆನಿಲಿಯಾ ಸಿನಿ ಲೋಕದ ಐಡಿಯಲ್ ಕಪಲ್. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು ಈಗ ಇಬ್ಬರು ಗಂಡು ಮಕ್ಕಳ ಪೋಷಕರಾಗಿದ್ದಾರೆ. ಅನೇಕ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಜೋಡಿ ಈಗ ಅಂಗಾಂಗ ದಾನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಓರ್ವ ವ್ಯಕ್ತಿ ತಮ್ಮ ಅಂಗಾಂಗ ದಾನ ಮಾಡುವ ಬಗ್ಗೆ ಬದುಕಿದ್ದಾಗಲೇ ಘೋಷಣೆ ಮಾಡಬೇಕು. ಅದರಂತೆ ಈಗ ಜೆನಿಲಿಯಾ ಮತ್ತು ರಿತೇಶ್ ಇಂತಹದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇವರ ನಿರ್ಧಾರಕ್ಕೆ ರಾಷ್ಟ್ರೀಯ ಅಂಗ ಮತ್ತು ಕಸಿ ಸಂಸ್ಥೆ ಧನ್ಯವಾದ ಸಲ್ಲಿಸಿದೆ.
ಬದುಕಿದ್ದಾಗಲೇ ಇಂತಹದ್ದೊಂದು ಒಪ್ಪಂದಕ್ಕೆ ಸಹಿ ಹಾಕಿದರೆ ಸಾವಿನ ಬಳಿಕ ಮೃತ ವ್ಯಕ್ತಿಯ ಕಣ್ಣು ಮೊದಲಾದ ಅಂಗಾಂಗಗಳನ್ನು ಪಡೆದುಕೊಳ್ಳಲಾಗುತ್ತದೆ. ಇದರಿಂದ ಎಷ್ಟೋ ಜನರ ಜೀವ, ಜೀವನ ಉಳಿಸಬಹುದಾಗಿದೆ. ರಿತೇಶ್ ಮತ್ತು ಜೆನಿಲಿಯಾ ಈಗ ಅಂತಹದ್ದೇ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.