Publish Date: Tue, 14 Dec 2021 (10:30 IST)
Updated Date: Tue, 14 Dec 2021 (10:32 IST)
ಮೈಸೂರು: ಬಿಸಿ ನೀರು ಮೈಮೇಲೆರೆದುಕೊಂಡು 2 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಸ್ನಾನ ಮಾಡಿಸಲು ಬಚ್ಚಲು ಮನೆಗೆ ಕರೆದೊಯ್ದಾಗ ತಣ್ಣೀರು ತರಲೆಂದು ತಾಯಿ ಹೊರಗೆ ಹೋಗಿದ್ದಳು. ಈ ಸಂದರ್ಭದಲ್ಲಿ ತಿಳಿಯದೇ ಮಗು ಬಿಸಿ ನೀರನ್ನು ಮೈಮೇಲೆರೆದುಕೊಂಡಿದೆ.
ಪರಿಣಾಮವಾಗಿ ಮಗು ಗಂಭೀರವಾಗಿ ಗಾಯಗೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಗಾಯ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.