Select Your Language

Notifications

webdunia
webdunia
webdunia
webdunia

ಗೆಳತಿಯ ಮನೆಗೆ ಹೋಗಿದ್ದ ಬಾಲಕಿ ಈಗ ಗರ್ಭಿಣಿ!

ಗೆಳತಿಯ ಮನೆಗೆ ಹೋಗಿದ್ದ ಬಾಲಕಿ ಈಗ ಗರ್ಭಿಣಿ!
ತುಮಕೂರು , ಮಂಗಳವಾರ, 14 ಡಿಸೆಂಬರ್ 2021 (09:30 IST)
ತುಮಕೂರು: ಗೆಳತಿಯ ಮನೆಗೆ ಖುಷಿಯಿಂದಲೇ ಹೋಗಿದ್ದ 8 ನೇ ತರಗತಿ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿದ್ದಾಳೆ! ವಿಚಾರಣೆ ಮಾಡಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು ಬೆಳಕಿಗೆ ಬಂದಿದೆ.

ಕೊರಟಗೆರೆಯಲ್ಲಿ ಈ ಘಟನೆ ನಡೆದಿದ್ದು, ನೋಟ್ಸ್ ತರಲೆಂದು ಬಾಲಕಿ ಗೆಳತಿಯ ಮನೆಗೆ ಹೋಗಿದ್ದಳು. ಆ ವೇಳೆ ಅಲ್ಲಿದ್ದ ಆರೋಪಿ ಆಕೆಗೆ ಕುಡಿಯುವ ನೀರಿಗೆ ಮತ್ತು ಬರಿಸುವ ಔಷಧಿ ಹಾಕಿ ಕೊಟ್ಟಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಘಟನೆ ಬಳಿಕ ಬಾಲಕಿ ಮಂಕಾಗಿದ್ದಳು. ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿ ಎನ್ನುವುದು ತಿಳಿದುಬಂದಿದೆ. ವಿಚಾರಣೆ ನಡೆಸಿದಾಗ ಬಾಲಕಿ ಸತ್ಯ ಬಾಯ್ಬಿಟ್ಟಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಮೊದಲ ಪೇಪರ್ಲೆಸ್ ಸರ್ಕಾರ ಯಾವುದು?