Publish Date: Fri, 25 May 2018 (13:33 IST)
Updated Date: Fri, 25 May 2018 (13:37 IST)
ಬೆಂಗಳೂರು : ರಾಜ್ಯ ವಿಧಾನಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಮೇಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಎರಡನೇ ಬಾರಿಗೆ ಸದನದ ಸಭಾಧ್ಯಕ್ಷರಾಗಿ ರಮೇಶ್ ಕುಮಾರ್ ಆಯ್ಕೆ ಆಗಿರುವುದಕ್ಕೆ ಖುಷಿ ತಂದಿದೆ. ಸಭಾಧ್ಯಕ್ಷರ ಸ್ಥಾನ ಎಲ್ಲ ಸದಸ್ಯರಿಗೆ ತಮ್ಮ ಅನುಭವಗಳನ್ನು ಧಾರೆ ಎರೆಯುವ ಸ್ಥಾನ, ತಮ್ಮಂತಹ ಉತ್ತಮ ಹಿರಿಯ ವಾಗ್ಮಿಗಳು ಸದನದಲ್ಲಿ ಇರಬೇಕು ಎಂದು ಹೇಳಿದ್ದಾರೆ.
ಹಾಗೇ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಮುಂತಾದವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ