Select Your Language

Notifications

webdunia
webdunia
webdunia
Wednesday, 16 April 2025
webdunia

ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು

Chief Commissioner inspected various places under South Zone
bangalore , ಮಂಗಳವಾರ, 10 ಜನವರಿ 2023 (19:16 IST)
ಬೆಂಗಳೂರು ಮಹಾನಗರ ದಕ್ಷಿಣ ವಲಯ ಜಯನಗರ ಹಾಗೂ ಪದ್ಮನಾಭನಗರ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ಜಗದ್ಗುರು ಶ್ರೀಶಿವರಾತ್ರೀಶ್ವರ ವೃತ್ತ(ಜಿ.ಎಸ್.ಎಸ್ ವೃತ್ತ)ದಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 
ಹೊಸದಾಗಿ ಡಾಂಬರೀಕರಣ ಮಾಡಿದ್ದು, ಅದನ್ನು ಪರಿಶೀಲಿಸಿ ಗುಣಮಟ್ಟ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ರಸ್ತೆ ಹಗೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಇರಿಸಿದ್ದ ಮಳಿಗೆಯ ಮಾಲೀಕರಿಗೆ ಇನ್ನುಮುಂದೆ ಪಾದಚಾರಿ ಮಾರ್ಗದಲ್ಲಿ ಯಾವುದೇ ಸಾಮಗ್ರಿಗಳನ್ನಿಡದಂತೆ ಸೂಚನೆ ನೀಡಿದರು.
 
 ಬನಶಂಕರಿ 2ನೇ ಹಂತ 5ನೇ ಮುಖ್ಯ ರಸ್ತೆಯ ಬಳಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಹಾಕಿದ್ದು, ಪಾದಚಾರಿ ಮಾರ್ಗದಲ್ಲಿ ಕಟ್ಟಡ ಸಾಮಗ್ರಿಗಳನ್ನು ಹಾಕುವವರಿಗೆ ದಂಡ ವಿಧಿಸಲು ತಿಳಿಸಿದರು.ಕರೀಸಂದ್ರ 7ನೇ ಮುಖ್ಯ ರಸ್ತೆ, 24ಎ ಕ್ರಾಸ್ ಬಳಿ, ರಸ್ತೆಗೆ  ಹೊಂದಿಕೊಂಡಂತೆ ಕಟ್ಟಡ ನಿರ್ಮಾಣ ಮಾಡಿದ್ದು, ಪಾಲಿಕೆಯಿಂದ ನೀಡಿರುವ ನಕ್ಷ ಮಂಜೂರಾತಿಯನ್ನು ಪರಿಶೀಲಿಸಿ ಅನಧಿಕೃತವಾಗಿ ನಿರ್ಮಾಣ ಮಾಡಿದ್ದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ದೆಯ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿ ಪರಾರಿ