Publish Date: Sat, 19 Jan 2019 (19:33 IST)
Updated Date: Sat, 19 Jan 2019 (19:35 IST)
ಚಿರತೆ ಚರ್ಮ ಮಾರಾಟ ಮತ್ತು ಖರೀದಿಗೆ ಯತ್ನಕ್ಕೆ ಮುಂದಾಗಿದ್ದ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿರತೆ ಚರ್ಮ, ಎರಡು ಕಾರು ಸಮೇತ ಹತ್ತು ಮಂದಿ ಬಂಧನವಾಗಿದೆ. ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರವಾರದ ಸೂರಜ್ (34), ಭಟ್ಕಳದ ರಾಘು (30), ನಾಗರಾಜ (25), ಪ್ರವೀಣ್ ರಾಮ ದೇವಾಡಿಗ, ಮೋಹನ್ ಜಿ. ನಾಯ್ಕ್ (24), ಸಂಜೀವ ಪೂಜಾರಿ , ಸುಬ್ರಹ್ಮಣ್ಯ (34), ಹೊನ್ನಾವರದ ಜಾನ್ಸನ್ (32), ತಗ್ಗರ್ಸೆಯ ವೀರೇಂದ್ರ ಶೆಟ್ಟಿ (35), ಬೈಂದೂರಿನ ನಾಗರಾಜ (28) ಬಂಧಿತರಾಗಿದ್ದಾರೆ.
ಭಟ್ಕಳ, ಬೈಂದೂರು ಭಾಗದಿಂದ ತಂದಿದ್ದ ಚಿರತೆ ಚರ್ಮ ವ್ಯವಹಾರದ ಡೀಲ್ ಕುದುರಿಸಲು ಬಂದಾಗ ಆರೋಪಿಗಳ ಬಂಧನವಾಗಿದೆ.
ಬೆಂಗಳೂರು ಪೊಲೀಸ್ ಅರಣ್ಯ ಘಟಕದ ಕಾರ್ಯಾಚರಣೆಗೆ ಕುಂದಾಪುರ ಅರಣ್ಯ ಇಲಾಖೆ ಸಾಥ್ ನೀಡಿತು.
ಮಾರುಕಟ್ಟೆಯಲ್ಲಿ ಚಿರತೆ ಚರ್ಮಕ್ಕೆ 40 ಲಕ್ಷ ಮೌಲ್ಯ ಇದೆ ಎಂದು ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ.