Select Your Language

Notifications

webdunia
webdunia
webdunia
webdunia

ಹಮ್ ಫೀಟ್ ತೋ ಇಂಡಿಯಾ ಫಿಟ್.... ಚಾಲೆಂಜ್ ಸ್ವೀಕರಿಸಿದ ಸಂಸದ ಪ್ರತಾಪ್ ಸಿಂಹ

ಹಮ್ ಫೀಟ್ ತೋ ಇಂಡಿಯಾ ಫಿಟ್.... ಚಾಲೆಂಜ್ ಸ್ವೀಕರಿಸಿದ ಸಂಸದ ಪ್ರತಾಪ್ ಸಿಂಹ
ಮೈಸೂರು , ಶುಕ್ರವಾರ, 25 ಮೇ 2018 (14:00 IST)
ಹಮ್ ಫೀಟ್ ತೋ ಇಂಡಿಯಾ ಫಿಟ್ ಅಭಿಯಾನಕ್ಕೆ ಸಂಸದ ಪ್ರತಾಪ್ ಕೈಜೋಡಿಸಿದ್ದು, ತಮ್ಮ ಕಟ್ಟು ಮಸ್ತಾದ ಎರಡು ಫೋಟೋಗಳನ್ನ ಸಮಾಜಿಕ ಜಾಲಾತಾಣಗಳಲ್ಲಿ ಹಾಕುವ ಮೂಲಕ ನಾನು ಸಹ ಫಿಟ್ ಆಗಿದ್ದೇನೆ ಎಂದು ಸಂದೇಶ ರವಾನಿಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ರಾಜ್ ವರ್ಧನಸಿಂಗ್ ರಾಥೋಡ್ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮತ್ತು ಅವರು ಉತ್ಸಾಹದಿಂದ ಕೆಲಸ ಮಾಡುವುದನ್ನ ನೋಡಿ ಪ್ರೇರಣಗೊಂಡಿದ್ದೇನೆ. ಪ್ರತಿ ನಿತ್ಯ ರಾತ್ರಿ ಹಗಲು ಎಂದು ಕೆಲಸ ಮಾಡುತ್ತಿದ್ದೇನೆ. ಇಡೀ ಭಾರತ ಫಿಟ್ ಆಗಿರಬೇಕೆಂದು ಮೋದಿ ಅವರು ಹೇಳುತ್ತಿರುತ್ತಾರೆ. ಅವರ ಮಾತಿನಿಂದ ಪ್ರೇರೇಪಣೆಗೊಂಡಿದ್ದೇನೆ. ಕೆಲಸ ಮಧ್ಯ ವ್ಯಾಯಮ ಮಾಡಿ ವಿಡಿಯೋವನ್ನ ಮಾಡಿ, ನಿಮ್ಮ ಫಿಟ್ ನೆಸ್ ನ ರಹಸ್ಯವೇನು ಎಂಬುದನ್ನ ಸಮಾಜಿಕ ಜಾಲಾತಾಣದಲ್ಲಿ ಹಾಕಿ. ವಿಡಿಯೋವನ್ನ ಇಡೀ ದೇಶ ನೋಡಿ ಪ್ರೇರಪಣೆಗೊಳ್ಳುತ್ತದೆ. ನಾವು ಫಿಟ್ ಆಗಿದ್ದರೆ ಇಡೀ ದೇಶ ಫಿಟ್ ಆಗಿರುತ್ತದೆ ಎಂದು  ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಹೆಸರಿನಡಿ ಅಭಿಯಾನವನ್ನ ಸಚಿವರು ಆರಂಭಿಸಿದರು.
 
ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕ್ರಿಕೆಟಿಗರ್ ಈ ಚಾಲೆಂಜ್ ನ್ನ ಸ್ವೀಕರಿಸಿ ತಮ್ಮ ಫಿಟ್ ನೆಸ್ ವಿಡಿಯೋವನ್ನ ಸಮಾಜಿಕ ಜಾಲಾತಾಣ ಹಾಕುತ್ತಿದ್ದಾರೆ. ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನಕ್ಕೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಚಾಲೆಂಜ್ ಸ್ವೀಕರಿಸಿ ತಮ್ಮ ಕಟ್ಟು ಮಸ್ತಾದ ಎರಡು ಫೋಟೋಗಳನ್ನ ಹಾಕಿ ವಿಡಿಯೋವನ್ನ ಸಧ್ಯದಲ್ಲೇ ಹಾಕುತ್ತೇನೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಾಸ ಮತ ಯಾಚನೆಗೆ ಬಿಜೆಪಿ ಮುಖಂಡರು ಯಾರೂ ಕೂಡ ಗೈರು ಹಾಜರಾಗಬೇಡಿ - ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ