Select Your Language

Notifications

webdunia
webdunia
webdunia
webdunia

ಗೆಳಯರೊಬ್ಬರು ಶಾನ್ವಿ ಶ್ರೀವಾಸ್ತವ್ ಗೆ ನೀಡಿದ ಚಾಲೆಂಜ್ ಏನು ಗೊತ್ತಾ…?

ಗೆಳಯರೊಬ್ಬರು ಶಾನ್ವಿ ಶ್ರೀವಾಸ್ತವ್ ಗೆ ನೀಡಿದ ಚಾಲೆಂಜ್ ಏನು ಗೊತ್ತಾ…?
ಬೆಂಗಳೂರು , ಸೋಮವಾರ, 21 ಮೇ 2018 (11:03 IST)
ಬೆಂಗಳೂರು: ‘ಮಾಸ್ಟರ್‌‍ಪೀಸ್’ ಬೆಡಗಿ ಶಾನ್ವಿ ಶ್ರೀವಾಸ್ತವ್ ಹೊಸ ಚಾಲೆಂಜ್ ಯೊಂದನ್ನುಆರಂಭಿಸಿದ್ದಾರೆ. ಅದೇನು ಅಂದ್ರೆ ಎಳನೀರನ್ನು ಸ್ಟ್ರಾ ಉಪಯೋಗಿಸದೇ ಕುಡಿಯುವ ’ನೋ ಸ್ಟ್ರಾ ಚಾಲೆಂಜ್’.


ಶಾನ್ವಿಗೆ ಎಳನೀರನ್ನು ಸ್ಟ್ರಾ ಬಳಸದಂತೆ ಕುಡಿಯುವಂತೆ ಗೆಳಯರೊಬ್ಬರು ಚಾಲೆಂಜ್ ಮಾಡಿದರಂತೆ. ‘ಮೊದಲು ಎಳನೀರಿನಲ್ಲಿ ನೀರು ತುಂಬಿಸಿ ಒಂದಷ್ಟು ಸಲ ಪ್ರಯತ್ನಿಸಿದೆ. 3-4 ಸಲ ಪ್ರಯತ್ನಿಸಿದ ಬಳಿಕ ಸ್ಟ್ರಾ ಇಲ್ಲದೆ ಎಳನೀರು ಕುಡಿಯುವಲ್ಲಿ ಯಶಸ್ವಿಯಾದೆ ಎಂದಿದ್ದಾರೆ. ಬಳಿಕ ಇದನ್ನೇ ಯಾಕೆ ಒಳ್ಳೆಯದಕ್ಕೆ ಬಳಸಬಾರದು ಎನ್ನಿತು" ಎಂದಿದ್ದಾರೆ ಶಾನ್ವಿ ಶ್ರೀವಾಸ್ತವ್.


ಸ್ಟ್ರಾ ಬಳಸದೆ ಎಳನೀರು ಕುಡಿಯಬೇಕೆಂದು ಹಲವಾರು ಜನ ಬಯಸುತ್ತಾರೆ. ಹಾಗಾಗಿ ಸ್ಟ್ರಾ ಇಲ್ಲದೆ ಎಳನೀರು ಕುಡಿಯುವ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದೇನೆ. ನೀವೂ ಈ ರೀತಿ ಮಾಡಿ ಎಂದು #nostrawchallengebyshanvi ಹ್ಯಾಟ್ ಟ್ಯಾಗ್ ಬಳಸಿ ಚಾಲೆಂಜ್ ಮಾಡಿದ್ದಾರೆ ಶಾನ್ವಿ.


ನೋ ಸ್ಟ್ರಾ ಚಾಲೆಂಜ್‌ ಉದ್ದೇಶ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು. ಪ್ಲಾಸ್ಟಿಕ್ ಬಳಸುವ ಮತ್ತು ಅದನ್ನು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಎಸೆಯುವುದನ್ನು ತಾನೂ ವಿರೋಧಿಸುತ್ತೇನೆ. ಹಾಗಾಗಿ ಈ ಹೊಸ ಚಾಲೆಂಜ್ ಎಂದಿದ್ದಾರೆ ಶಾನ್ವಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ರಾಝಿ ಸಿನಿಮಾ