Select Your Language

Notifications

webdunia
webdunia
webdunia
webdunia

ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ರಾಝಿ ಸಿನಿಮಾ

ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ರಾಝಿ ಸಿನಿಮಾ
ಬೆಂಗಳೂರು , ಭಾನುವಾರ, 20 ಮೇ 2018 (12:24 IST)
ಮುಂಬೈ: ಅಲಿಯಾ ಭಟ್ ಹಾಗೂ ವಿಕ್ಕಿ ಕೌಶಾಲ್ ಅಭಿನಯದ ಮೇಘನಾ ಗುಲ್ಜಾರ್ ಆ್ಯಕ್ಷನ್ ಕಟ್ ಹೇಳಿರುವ  ’ರಾಝಿ’ ಸಿನಿಮಾ ಬಾಕ್ಸ್ ಆಫೀಸಲ್ಲಿ ಸಖತ್ ಸದ್ದುಮಾಡುತ್ತಿದೆ. ಒಟ್ಟಾರೆ ಮೊದಲ ವಾರದ ಗಳಿಕೆ 56.59 ಕೋಟಿಗಳಷ್ಟಾಗಿದೆಯಂತೆ.


ಆಲಿಯಾ ಭಟ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 70 ರ ದಶಕದ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರ ತಯಾರಾಗಿದೆ. ಇದೇ ಸಮಯದಲ್ಲಿ ಭಾರತ ಪಾಕಿಸ್ತಾನ ಯುದ್ಧ ಸಹ ನಡೆದಿತ್ತು, ಆ ಸಮಯದಲ್ಲಿ ಭಾರತೀಯ ಯುವತಿಯೊಬ್ಬಳು ಪಾಕಿಸ್ತಾನಕ್ಕೆ ಗೂಢಚಾರಿಯಾಗಿ ಹೋಗುವ ಕಥೆ ಸಿನಿಮಾದಲ್ಲಿ ಇದೆ.


ಇನ್ನು ಸಿನಿಮಾ ಹಿಟ್‌ ಆಗಲು ಕಾರಣವಾದ ಇಡೀ ತಂಡಕ್ಕೆ ಮೇಘನಾ ಧನ್ಯವಾದ ಹೇಳಿದ್ದಾರೆ. ಜಂಗ್ಲಿ ಪಿಕ್ಚರ್ಸ್‌ ಮತ್ತು ಧರ್ಮ ಪ್ರೊಡಕ್ಷನ್‌ ಬ್ಯಾನರ್‌ನಡಿ ವಿನೀತ್‌ ಜೈನ್‌, ಕರಣ್‌ ಜೋಹರ್‌ ಇನ್ನಿತರರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗಳಿಗೆ ಕಿಸ್ ಕೊಟ್ಟ ಫೋಟೊದಿಂದ ಟ್ರೋಲ್ ಗೆ ಗುರಿಯಾದ ಐಶ್ವರ್ಯಾ ರೈ!