Select Your Language

Notifications

webdunia
webdunia
webdunia
webdunia

ಸಿಜೆ ರಾಯ್ ಕಾಂಗ್ರೆಸ್ ಗೆ ಫಂಡಿಂಗ್ ಮಾಡ್ತಿದ್ರು, ನಟಿಯರ ಸಹವಾಸವಿತ್ತು: ಚಕ್ರವರ್ತಿ ಚಂದ್ರಚೂಡ್ ಆರೋಪ

CJ Roy-Chakravarthy Chanddrachud
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಸಿಜೆ ರಾಯ್ ಬಗ್ಗೆ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಿಜೆ ರಾಯ್ ಗೆ ನಟಿಯರ ಸಹಸವಾಸವಿತ್ತು ಎಂದೂ ಹೇಳಿದ್ದಾರೆ.

ಸಿಜೆ ರಾಯ್ ಗೆ 17 ರಾಷ್ಟ್ರಗಳಲ್ಲಿ ವ್ಯವಹಾರವಿತ್ತು. ಇಷ್ಟೊಂದು ರಾಷ್ಟ್ರಗಳಲ್ಲಿ ವ್ಯವಹಾರವಿದ್ದ ಮನುಷ್ಯ ಕೇವಲ ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ಸಿಜೆ ರಾಯ್ ಸಾವು ಐಟಿ ರೈಡ್ ಗಿಂದ ದೊಡ್ಡದು. ಕಾಂಗ್ರೆಸ್ ನ ಹಲವು ನಾಯಕರೊಂದಿಗೆ ಒಳ್ಳೆ ಒಡನಾಟವಿದ್ದ ವ್ಯಕ್ತಿ.

ಕಾಂಗ್ರೆಸ್ ಗೆ ಚುನಾವಣಾ ಫಂಡಿಂಗ್ ಕೂಡಾ ಮಾಡಿದ್ದಾರೆ ಎಂದು ಮಾಹಿತಿಯಿದೆ. ಸಿಜೆ ರಾಯ್ ಬೇರೆ ದೇಶದ ನಾಗರಿಕತ್ವಕ್ಕೆ ಯಾಕೆ ಅರ್ಜಿ ಹಾಕಿದ್ರು ಎಂದೂ ತನಿಖೆಯಾಗಬೇಕು. ನನಗನಿಸುವ ಪ್ರಕಾರ ಈ ಸಾವಿಗೆ ಬೇರೆಯೇ ಕಾರಣವಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ಸಿಜೆ ರಾಯ್ ಸಿನಿಮಾಗಳಿಗೂ ಫೈನಾನ್ಸ್ ಮಾಡುತ್ತಿದ್ದರು. ಹೀಗಾಗಿ ಅವರಿಗೆ ತೆಲುಗು ಚಿತ್ರರಂಗದ ಕೆಲವು ನಟಿಯರ ಪರಿಚಯವಿತ್ತು. ಅವರ ಮಿಡ್ ನೈಟ್ ಫೋಷೋ ಸೆಷನ್ ಗೆ ನಟಿಯರು ಬರ್ತಿದ್ರು. ಅವರೆಲ್ಲಾ ಕಾಫಿ ಕುಡಿದು ಹೋಗೋ ಬದಲು ಕಾಫಿ ಕಪ್ ಬೇಕು ಅಂತಿದ್ರು. ಸಿಜೆ ರಾಯ್ ಅವ್ರನ್ನು ಬ್ಲ್ಯಾಕ್ ಮೇಲ್ ಮಾಡೋಕ್ಕೆ ಶುರು ಮಾಡಿದ್ರು. ಇಂತದ್ದೆಲ್ಲಾ ಹ್ಯಾಂಡಲ್ ಮಾಡೋದು ಸಿಜೆ ರಾಯ್ ಗೆ ತುಂಬಾ ಸುಲಭ. ಸಿಜೆ ರಾಯ್ ಆತ್ಮಹತ್ಯೆ ಗಂಭೀರ ವಿಚಾರ. ಬಿಜೆಪಿ ವರ್ಸಸ್ ಕಾಂಗ್ರೆಸ್ ಫಂಡಿಂಗ್ ಮಾಫಿಯಾಗೆ ಅವರು ಬಲಿಯಾಗಿದ್ದಾರೆ ಎಂದು ಚಕ್ರವರ್ತಿ ಚಂದ್ರಚೂಡ್ ಗಂಭೀರ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಜೆ ರಾಯ್ ಮರಣೋತ್ತರ ವರದಿಯಲ್ಲಿ ಶಾಕಿಂಗ್ ವಿಚಾರಗಳು ಬಹಿರಂಗ