ಬೆಂಗಳೂರು: ಐಟಿ ದಾಳಿ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ ಕಾನ್ಫಿಡೆನ್ಸ್ ಗ್ರೂಪ್ ಮಾಲಿಕ ಸಿಜೆ ರಾಯ್ ಈ ಹಿಂದೆ ಸಂದರ್ಶನವೊಂದರಲ್ಲಿ ನಾಳೆ ಸಾಯ್ತೀನಿ ಎಂದ್ರೂ ನನಗೆ ಬೇಜಾರಿಲ್ಲ ಎಂದಿದ್ದರು.
ಉದ್ಯಮಿ ಮಾತ್ರವಲ್ಲದೆ, ಸಾಮಾಜಿಕ ಕೆಲಸಗಳು, ಹಲವು ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡುತ್ತಿದ್ದ ಸಿಜೆ ರಾಯ್ ಸೆಲೆಬ್ರಿಟಿಯೇ ಆಗಿದ್ದರು. ಅವರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದ ಸಾರ್ಥಕತೆ ಬಗ್ಗೆ ಹೇಳಿಕೊಂಡಿದ್ದರು.
ನಾಳೆ ಸಾಯ್ತೀನಿ ಅಂದ್ರೂ ನನಗೆ ಬೇಜಾರಿಲ್ಲ. ಒಂದು ವೇಳೆ ನಾನು ವಿಮಾನದಲ್ಲಿ ಹಾರಾಡುವಾಗ ಪೈಲೆಟ್ ವಿಮಾನ ಪತನವಾಗುತ್ತದೆ ಕೆಲವೇ ಕ್ಷಣದಲ್ಲಿ ನಾವು ಸಾಯುತ್ತೇವೆ ಎಂದರೂ ನಾನು ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡುತ್ತೇನೆ. ನಾನು ಅಳಲ್ಲ. ನಾಳೆ ಸಾಯುತ್ತೇನೆ ಎಂದರೂ ನನಗೆ ಖುಷಿಯೇ. ನಾನು ತಮಾಷೆ ಮಾಡುತ್ತಿಲ್ಲ. ಯಾಕೆಂದರೆ ನಾನು ಜೀವನದಲ್ಲಿ ಅಂದುಕೊಂಡಿದ್ದನ್ನೆಲ್ಲವೂ ಮಾಡಿದ್ದೇನೆ. ಹೀಗಾಗಿ ನನಗೆ ಸಂತೋಷವಿದೆ ಎಂದಿದ್ದರು. ವಿಪರ್ಯಾಸವೆಂದರೆ ಜೀವನದ ಸಾರ್ಥಕತೆ ಬಗ್ಗೆ ಅಷ್ಟು ಮಾತನಾಡಿದ ವ್ಯಕ್ತಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೂ ಅವರ ಸಾವಿನ ನಂತರ ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಏನೇ ಆದರೂ ಇಷ್ಟೆಲ್ಲಾ ಪ್ರಬುದ್ಧರಾಗಿ ಮಾತನಾಡಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಸರಿಯಲ್ಲ ಎಂದಿದ್ದಾರೆ.