Publish Date: Sat, 16 Sep 2023 (18:20 IST)
Updated Date: Sat, 16 Sep 2023 (16:24 IST)
MLA ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಹಣ ಪಡೆದ ವಂಚನೆ ಎಸಗಿದ ಪ್ರಕರಣ ಸಂಬಂಧ ಆರೋಪಿಗಳಾದ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಕೃತ್ಯ ಎಸಗಲು ಸ್ಕ್ರಿಪ್ಟ್ಗೆ ತಕ್ಕಂತೆ ಆಗಾಗ ಲೊಕೇಶನ್ಗಳನ್ನು ಬದಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ನಿನ್ನೆ ಕೆಲವೆಡೆ ಸ್ಥಳ ಮಹಜರು ನಡೆಸಿದ ಸಿಸಿಬಿ ಪೊಲೀಸರು ಇಂದು ಮತ್ತೆ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಈ ನಡುವೆ ಚೈತ್ರಾ ಕಬಾಬ್ ಗ್ಯಾಂಗ್ ಡೀಲಿಂಗ್ ನಡೆಸಿದ ಆಡಿಯೋ ಬಹಿರಂಗವಾಗಿದೆ. ಪ್ರಸಾದ್ ಮತ್ತು ಚೈತ್ರಾ ನಡುವಿನ ಆಡಿಯೋ ಸಂಭಾಷಣೆ ಇದಾಗಿದೆ. ಅಲ್ಲದೆ, ಈ ಸಂಭಾಷಣೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಪ್ರಸಾದ್ ಚೈತ್ರಾಗೆ ಪರಿಚಯಿಸಿದ್ದಾನೆ.