Select Your Language

Notifications

webdunia
webdunia
webdunia
webdunia

ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ : ಚೈತ್ರಾ ಕುಂದಾಪುರ

ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ : ಚೈತ್ರಾ ಕುಂದಾಪುರ
ಬೆಂಗಳೂರು , ಶುಕ್ರವಾರ, 15 ಸೆಪ್ಟಂಬರ್ 2023 (10:57 IST)
ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ವಂಚಿಸಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ ರೋಚಕ ವಿಚಾರವನ್ನು ಬಹಿರಂಗ ಪಡಿಸಿದ್ದಾಳೆ.

ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆ ತಂದ ವೇಳೆ ಸ್ವಾಮೀಜಿ ಬಂಧನದ ನಂತರ ದೊಡ್ಡವರ ಹೆಸರುಗಳು ಬಯಲಾಗಲಿದೆ ಎಂದಿದ್ದಾಳೆ.

ಇಂದಿರಾ ಕ್ಯಾಂಟಿನ್ ಬಿಲ್ ವಿಚಾರವಾಗಿ ಈ ರೀತಿ ಷಡ್ಯಂತ್ರ ಮಾಡಿ ನನ್ನನ್ನು ಸಿಲುಕಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಎ ಒನ್ ಆರೋಪಿಯಾಗಿರಲಿ ನಾನು, ಆದರೂ ಮುಂದೆ ಸತ್ಯ ಹೊರ ಬರಲಿದೆ ಎಂದು ಹೇಳಿಕೊಂಡಿದ್ದಾಳೆ.

ಈ ಮೂಲಕ ಸ್ವಾಮಿಜಿ ಅಭಿನವ ಹಾಲಾಶ್ರಿ ಬಂಧನದ ಬಳಿಕ ಪ್ರಕರಣದಲ್ಲಿ ಮತ್ತಷ್ಟು ವಿಚಾರಗಳು ಹೊರ ಬರಲಿವೆ ಎಂಬ ಸೂಚನೆ ನೀಡಿದ್ದಾಳೆ ಆರೋಪಿ ಚೈತ್ರಾ. 
ಇದಕ್ಕೆ ಪ್ರತಿಕ್ರಿಯಿಸಿರುವ ಗೋವಿಂದ ಬಾಬು ಅವರು ಈ ಪ್ರಕರಣಕ್ಕೂ ಇಂದಿರಾ ಕ್ಯಾಂಟಿನ್ ಬಿಲ್ ವಿಚಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ- ಮಾವನಿಂದ ರೇಪ್‍ಗೊಳಗಾದ ಪತ್ನಿಯನ್ನು ಹೊರಗಾಕಿದ ಪತಿ!