Publish Date: Fri, 15 Sep 2023 (17:00 IST)
Updated Date: Fri, 15 Sep 2023 (16:59 IST)
ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ನಿಂದ ವಂಚನೆ ಪ್ರಕರಣ ದಿನಕ್ಕೊಂದು ತಿರುವನ್ನ ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿ ಸಿಸಿಬಿಗೆ ರಹಸ್ಯ ಮಾಹಿತಿ ರವಾನಿಸಿದ್ದಾರೆಂಬ ಕೇಳಿಬಂದಿದೆ. ಸ್ವಾಮೀಜಿ ಪ್ರಕರಣದಡಿ ಸಿಲುಕಿಕೊಂಡಿದ್ದು, ಆದ್ರೆ ಸಿಸಿಬಿ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳದೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಇದರ ನಡುವೆಯೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯುವವರೆಗೂ ಯಾರಿಗೂ ಕಾಣದಿರಲು ನಿರ್ಧಾರ ಮಾಡಿದ್ದು, ಸಿಸಿಬಿ ಪೊಲೀಸರಿಗೆ ಪರೋಕ್ಷ ಮಾಹಿತಿಯನ್ನ ರವಾನಿಸಿದ್ದಾರೆ. ತಮ್ಮ ರಹಸ್ಯ ಮಾಹಿತಿಯಲ್ಲಿ ಹಣವನ್ನು ವಾಪಸ್ ನೀಡಲು ಸಿದ್ಧವೆಂದಿರೋ ಸ್ವಾಮೀಜಿ. ಈ ಮಾಹಿತಿಯನ್ನ ತಮ್ಮ ಆಪ್ತರ ಮೂಲಕ ಪೊಲೀಸರಿಗೆ ರವಾನಿಸಿದ್ದಾರೆಂಬ ಮಾಹಿತಿ ಕೇಳಿಬಂದಿದೆ. ಈ ಪ್ರಕರಣದಡಿ ಹಾಲಶ್ರೀ ಸ್ವಾಮೀಜಿ ಮೇಲೂ ಉದ್ಯಮಿ ಪೂಜಾರಿಗೆ 1.5 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.