Select Your Language

Notifications

webdunia
webdunia
webdunia
webdunia

ಚೈತ್ರಾ ಬಗ್ಗೆ ಮಾಹಿತಿ ಇರಲಿಲ್ಲ-ಮಾಜಿ ಶಾಸಕ ಪರಣ್ಣ ಮುನವಳ್ಳಿ

Chaitra inquiry
ಕೊಪ್ಪಳ , ಶುಕ್ರವಾರ, 15 ಸೆಪ್ಟಂಬರ್ 2023 (17:25 IST)
ಚೈತ್ರಾ ಕುಂದಾಪುರ ಬಿಜೆಪಿ ಶಾಸಕರ ಪರ ಪ್ರಚಾರ ವಿಚಾರವಾಗಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಅವರು, 2018 ರಲ್ಲಿ ಚೈತ್ರಾ ಕುಂದಾಪುರ ಬಂದು ಪ್ರಚಾರ ಮಾಡಿದ್ದು ನಿಜ. ಆದರೆ ಅವರು ಹಿಂದುತ್ವ ಪರ ಪ್ರಚಾರ ಮಾಡಿದ್ರು. ಚುನಾವಣೆ ಮಾಡಿ ಹೋದ್ರು, ಅವರ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಏನಾದರೂ ತಪ್ಪು ಮಾಡಿದ್ರೆ, ಕಾನೂನು ಕ್ರಮ ಆಗುತ್ತೆ. ಐದು ವರ್ಷದ ಹಿಂದೆ ಸಣ್ಣ ಪುಟ್ಟ ಸಹಾಯವನ್ನು ಚೈತ್ರಾ ಕುಂದಾಪುರಗೆ ಮಾಡಿದ್ವಿ. ಆದ್ರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ನಾವು ಸಹಾಯ ಮಾಡಿಲ್ಲ..ದೊಡ್ಡ ಸಹಾಯ ಮಾಡೋಕೆ ನಮ್ಮಿಂದ ಸಾಧ್ಯವಿಲ್ಲ..ಐದು ವರ್ಷದ ಹಿಂದೆ ಚೈತ್ರಾ ಕುಂದಾಪುರ ಮೇಲೆ ಕೇಸ್ ದಾಖಲಾಗಿದ್ವು. ಆದರೆ ಇದೀಗ ಅವೇಲ್ಲಾ ಮುಗಿದಿವೆ. ಆವಾಗಿನಿಂದ ನಮಗೆ ಯಾವುದೇ ಸಂಪರ್ಕ ಇಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್​ಗೆ ಹಾಲಶ್ರೀ ಅರ್ಜಿ