Select Your Language

Notifications

webdunia
webdunia
webdunia
webdunia

ನಿಯಂತ್ರಣ ತಪ್ಪಿ ವಾಹನಗಳ ಮೇಲೆ ಹರಿದ ಸಿಮೆಂಟ್ ಲಾರಿ -10 ವಾಹನಗಳು ಜಖಂ

ನಿಯಂತ್ರಣ ತಪ್ಪಿ ವಾಹನಗಳ ಮೇಲೆ ಹರಿದ ಸಿಮೆಂಟ್ ಲಾರಿ -10 ವಾಹನಗಳು ಜಖಂ
bangalore , ಬುಧವಾರ, 26 ಅಕ್ಟೋಬರ್ 2022 (17:40 IST)
ನಿಯಂತ್ರಣ ತಪ್ಪಿ ವಾಹನಗಳ ಮೇಲೆ ಹರಿದ ಸಿಮೆಂಟ್ ಲಾರಿಯಿಂದ 10 ವಾಹನಗಳು ಜಖಂ ಅಗಿದೆ. ಈ ಘಟನೆ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.ಅತಿವೇಗವಾಗಿ ಡಿವೈಡರ್  ಹತ್ತಿದ ಕಾರು, ಆಟೋಗಳಿಗೆ ಲಾರಿ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಓರ್ವ ಮಹಿಳೆಗೆ ಗಂಭೀರಗಾಯಗೊಂಡಿದ್ರೆ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.ಚಿಕ್ಕಬಳ್ಳಾಪುರದ ಹೋಂಡಾ ಶೋರೂಂ ನೌಕರೆ ಸೋಣ್ಣೇನಹಳ್ಳಿಯ ಲಕ್ಷ್ಮಿ (25) ಗಾಯಗೊಂಡ ಮಹಿಳೆ.
 
ಇನ್ನೂ ಲಾರಿ ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದಾರೆ.ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು,ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸಪಾಡುತ್ತಿದ್ದಾರೆ.ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿ ಅಪಘಾತ ಮಾಡಿರುವ ಬಗ್ಗೆ ಅನುಮಾನ  ವ್ಯಕ್ತವಾಗಿದ್ದು,ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು.ಗಾಯಾಳು ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದುವರಿದ ಚೀನಿ ಆ್ಯಪ್ ಗಳ ಹಾವಳಿ