Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಹತ್ಯೆಗೂ ರವಿ ಬೆಳಗೆರೆಗೂ ಸಂಬಂಧವಿದೆಯಾ? ಪೊಲೀಸರು ವಿಚಾರಣೆಯಲ್ಲಿ ಕೇಳಿದ್ದೇನು?

ಗೌರಿ ಲಂಕೇಶ್ ಹತ್ಯೆಗೂ ರವಿ ಬೆಳಗೆರೆಗೂ ಸಂಬಂಧವಿದೆಯಾ? ಪೊಲೀಸರು ವಿಚಾರಣೆಯಲ್ಲಿ ಕೇಳಿದ್ದೇನು?
ಬೆಂಗಳೂರು , ಶನಿವಾರ, 9 ಡಿಸೆಂಬರ್ 2017 (08:46 IST)
ಬೆಂಗಳೂರು: ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ನಡೆಸುವಾಗ ರವಿ ಬೆಳಗೆರೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ರವಿ ಬೆಳಗೆರೆಗೂ ಗೌರಿ ಲಂಕೇಶ್ ಗೂ ಮನಸ್ತಾಪವಿತ್ತಾ ಎಂದು ವಿಚಾರಣೆ ನಡೆಸುತ್ತಿದ್ದಾರೆ.
 

ಸಿಸಿಬಿ ಕಚೇರಿಯಲ್ಲಿ ರವಿ ಬೆಳಗೆರೆ ವಿಚಾರಣೆ ನಡೆಸುತ್ತಿರುವ ಪೊಲೀಸರು ಗೌರಿ ಲಂಕೇಶ್ ಗೂ ನಿಮಗೂ ಏನಾದ್ರೂ ಮನಸ್ತಾಪವಿತ್ತಾ? ಗೌರಿ ಜತೆ ಜಗಳವಾಡಿದ್ರಾ? ಸುನಿಲ್ ಹೆಗ್ಗರವಳ್ಳಿಗೆ ಗೌರಿ ಲಂಕೇಶ್ ಆಶ್ರಯ ಕೊಟ್ಟಿದ್ದರಾ ಎಂದು ವಿಚಾರಣೆ ನಡೆಸಿದ್ದಾರೆ.

ಗೌರಿ ಲಂಕೇಶ್ ತಂದೆ ಹಿರಿಯ ಸಾಹಿತಿ ಲಂಕೇಶ್ ಅವರ ಗರಡಿಯಲ್ಲೇ ಬೆಳೆದವರು ರವಿ ಬೆಳಗೆರೆ. ಇದೀಗ ಗೌರಿ ಹತ್ಯೆಗೂ ರವಿ ಬೆಳೆಗೆರೆ ಸಂಬಂಧವಿಲ್ಲ ಎಂದು ಪೊಲೀಸರು, ಗೃಹಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರೂ, ಆ ನಿಟ್ಟಿನಲ್ಲಿಯೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಪ್ರಚಾರವನ್ನೂ ಬಿಟ್ಟು ಓಡಿದ ರಾಹುಲ್! ಕಾರಣವೇನು ಗೊತ್ತಾ?!