Publish Date: Thu, 05 Oct 2017 (11:07 IST)
Updated Date: Thu, 05 Oct 2017 (11:10 IST)
ಬೆಂಗಳೂರು: ಟಿಟಿಡಿ ಮಾಜಿ ಅಧ್ಯಕ್ಷ ದಿ. ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದ ಗೀತಾ ವಿಷ್ಣುವನ್ನು ಪೊಲೀಸರು ತೀವ್ರ ತನಿಖೆಗೆ ಒಳಪಡಿಸಲಿದ್ದಾರೆ. ನಾಲ್ಕು ಕೇಸ್ ಗಳಲ್ಲಿ ಗೀತಾ ವಿಷ್ಣು ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.
ಕಾನೂನಿಗೆ ಚ್ಯುತಿ ತರುವ ರೀತಿಯಲ್ಲಿ ವರ್ತನೆ, ಅಪಘಾತ ಸಂದರ್ಭ ಕಾರಿನಲ್ಲಿ ಗಾಂಜಾ ಸಿಕ್ಕಿದ ಹಿನ್ನಲೆಯಲ್ಲಿ ಗೀತಾ ವಿಷ್ಣುವನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಲಿದ್ದಾರೆ. ಮೊನ್ನೆಯಷ್ಟೇ ನಡುರಾತ್ರಿ ಸೌಂತ್ ಎಂಡ್ ಸರ್ಕಲ್ ಬಳಿ ಫುಟ್ ಪಾತ್ ಮೇಲೆ ಕಾರು ಹರಿಸಿದ್ದ ಗೀತಾ ವಿಷ್ಣು ದಾಂಧಲೆ ಎಬ್ಬಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ