Publish Date: Fri, 22 Sep 2023 (15:20 IST)
Updated Date: Fri, 22 Sep 2023 (16:58 IST)
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿದ ಚೈತ್ರಾ ಮತ್ತು ಆಕೆಯ ಸಹಚರರನ್ನು ಸಿಸಿಬಿ ತನಿಖೆಗೊಳಪಡಿಸಿದೆ.. ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ.. ಇಂದು ವಿಚಾರಣೆಗೆ ಹಾಜರಾಗಲು ತಿಪ್ಪೇಸ್ವಾಮಿ, ಲಕ್ಷ್ಮಣ ಹಾಗೂ ಪ್ರಣವ್ ಪ್ರಸಾದ್‌ಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.. ಇವರು ಅಭಿನವ ಹಾಲಶ್ರೀ ಆಪ್ತರಾಗಿದ್ದು, ವಿಚಾರಣೆಗಾಗಿ ನೋಟಿಸ್ ನೀಡಲಾಗಿದೆ. ನಿನ್ನೆ ಪ್ರಣವ್ ಹಣ ಕೊಟ್ಟು ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿತ್ತು.. ಚೈತ್ರಾ ಆಪ್ತ ಮಂಜು ಎಂಬಾತನಿಗೂ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.