Publish Date: Sat, 16 Sep 2023 (16:49 IST)
Updated Date: Sat, 16 Sep 2023 (15:51 IST)
ಸಿಸಿಬಿ ಪೊಲೀಸರು ಚೈತ್ರಾ ಆ್ಯಂಡ್ ಟೀಂನ್ನ ಕಸ್ಟಡಿಗೆ ಪಡೆದು, ಇಂದಿಗೆ ನಾಲ್ಕು ದಿನಗಳಾಗಿವೆ. ಎ1 ಆರೋಪಿಯಾಗಿರುವ ಚೈತ್ರಾ ಕುಂದಾಪುರ ನಿನ್ನೆ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದು, ಇಂದು ಕೂಡ ಚೈತ್ರಾ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಇರೋ ಸಾಧ್ಯತೆಯಿದೆ. ನಿನ್ನೆ ಎಲ್ಲಾ ರೀತಿಯ ತಪಾಸಣೆಗಳನ್ನ ಚೈತ್ರಾಗೆ ಮಾಡಿದ್ದು, ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಚೈತ್ರಾಳನ್ನ ವೈದ್ಯರು ಐಸಿಯುನಲ್ಲೇ ಇಟ್ಟಿದ್ದಾರೆ. ಸಿಸಿಬಿ ಪೊಲೀಸರು ಒಟ್ಟು 7 ಆರೋಪಿಗಳನ್ನ ಬಂಧಿಸಿದ್ದು, ಅದರಲ್ಲಿ A1 ಚೈತ್ರಾ ಆಸ್ಪತ್ರೆಯಲ್ಲಿದ್ರೆ ಉಳಿದವರು ಕಸ್ಟಡಿಯಲ್ಲಿದ್ದಾರೆ.