Select Your Language

Notifications

webdunia
webdunia
webdunia
webdunia

ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಭೇದಿಸಿದ CCB

ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಭೇದಿಸಿದ CCB
bangalore , ಮಂಗಳವಾರ, 6 ಡಿಸೆಂಬರ್ 2022 (17:50 IST)
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಮನೆಯೊಂದ್ರಲ್ಲಿ ಪ್ರತಿಷ್ಠಿತ ವಿವಿಗಳ ಹೆಸರಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಮಾಡಲಾಗ್ತಿತ್ತು. ಈ ದಂಧೆಯನ್ನು CCB ಪೊಲೀಸರು ಭೇದಿಸಿದ್ದಾರೆ. ದೇಶದ 29 ಯೂನಿವರ್ಸಿಟಿಗಳ ಮಾರ್ಕ್ಸ್ ಕಾರ್ಡ್ ನಕಲಿ ಮಾಡಿ ಮಾರಾಟ ಮಾಡಲಾಗ್ತಿತ್ತು. ಈ ಪ್ರಕರಣದ ಬೆನ್ನತ್ತಿದ್ದ CCB, ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1500ಕ್ಕೂ ಅಧಿಕ ನಕಲಿ ಮಾರ್ಕ್ಸ್ ಕಾರ್ಡ್, 80 ನಕಲಿ ಸೀಲ್, 30 ಹಾಲೋಗ್ರಾಂ ಸ್ಟಿಕ್ಕರ್, 8 ಮೊಬೈಲ್​​​ ಅನ್ನು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಓಪನ್ ಯೂನಿವರ್ಸಿಟಿ, ಪಿ‌ಯು ಬೋರ್ಡ್‌, ಉತ್ತರ ಪ್ರದೇಶದ C.V. ರಾಮನ್ ಯೂನಿವರ್ಸಿಟಿ, ಮೇಘಾಲಯದ ವಿಲಿಯಂ ಕ್ಯಾರಿ ಯೂನಿವರ್ಸಿಟಿ ಸೇರಿ 29ಕ್ಕೂ ಯೂನಿರ್ವಸಿಟಿಗಳ ನಕಲಿ ಮಾರ್ಕ್ಸ್‌ ಕಾರ್ಡ್​ಗಳನ್ನ ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡಲಾಗ್ತಿತ್ತು. CCB ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಡರ್​​​ ದೃಶ್ಯ CCTVಯಲ್ಲಿ ಸೆರೆ