Select Your Language

Notifications

webdunia
webdunia
webdunia
webdunia

ಕನ್ನಡ ಬಾವುಟ ಸುಟ್ಟ ದುರಹಂಕಾರಿ

Kannada flag burned arrogant
bangalore , ಮಂಗಳವಾರ, 6 ಡಿಸೆಂಬರ್ 2022 (15:48 IST)
ಅಮೃತೇಶ್ ಎಂಬ ಹಿಂದಿವಾಲ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾನೆ. ಬೆಂಗಳೂರಿನ HSR ಲೇಔಟ್​​​​​ನ ಪರಂಗಿಪಾಳ್ಯ ಬಳಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿ ಅಮೃತೇಶ್ ಈ ಕೃತ್ಯ ನಡೆಸಿದ್ದಾನೆ. ಡಿಸೆಂಬರ್‌ 4ರ ರಾತ್ರಿ 10 ಗಂಟೆ ಸುಮಾರಿಗೆ ಧ್ವಜಕ್ಕೆ ಬೆಂಕಿ ಇಟ್ಟಿದ್ದಾನೆ. ಬೇಕರಿಯೊಂದರ ಬಳಿ ಅಮೃತೇಶ್ ಧ್ವಜಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾನೆ.  ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಕನ್ನಡ ಬರಲ್ಲ ಅಂತ ದುರಹಂಕಾರದ ಮಾತನಾಡಿದ್ದಾನೆ. ಕೂಡಲೇ ಸ್ಥಳೀಯರು HSR ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳೆದ ಬಾರಿ ನನ್ನ ಸ್ನೇಹಿತರನ್ನ ಪೊಲೀಸ್ರು ಅರೆಸ್ಟ್ ಮಾಡಿದ್ರು. ಅದಕ್ಕಾಗಿ ನಾನು ಬಾವುಟ ಸುಟ್ಟು ಏಕಾಂಗಿಯಾಗಿ ಪ್ರೊಟೆಸ್ಟ್ ಮಾಡ್ತಿದ್ದೆ ಎಂದು ಹೇಳಿದ್ದಾನೆ. HSR ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂವಿಧಾನ ರಕ್ಷಣೆ ಮಾಡ್ಬೇಕು- ಸಿದ್ದು