Select Your Language

Notifications

webdunia
webdunia
webdunia
webdunia

ವಿಚಾರಣೆಗೆ IAS ಅಧಿಕಾರಿಗಳು ಹಿಂದೇಟು

ವಿಚಾರಣೆಗೆ IAS ಅಧಿಕಾರಿಗಳು ಹಿಂದೇಟು
bangalore , ಮಂಗಳವಾರ, 6 ಡಿಸೆಂಬರ್ 2022 (15:22 IST)
ಮತದಾರರ ಮಾಹಿತಿಯನ್ನು ಅಕ್ರಮವಾಗಿ ಕಲೆ ಹಾಕಿದೆ ಎಂದು ಚಿಲುಮೆ ಸಂಸ್ಥೆ ಮೇಲೆ ಕೇಸ್​​ ದಾಖಲಾಗಿದೆ. ಆದರೆ IAS ಅಧಿಕಾರಿಗಳು ವಿಚಾರಣೆಗೆ ಹಾಜರಾಗದೇ ಕಳ್ಳಾಟ ಮಾಡ್ತಿದ್ದಾರೆ. ನೋಟಿಸ್ ಜಾರಿ ಮಾಡಿದ್ರೂ ಸಹ ವಿಚಾರಣೆಗೆ ಹಾಜರಾಗಲು ಮೀನಾಮೇಷ ಎಣಿಸುತ್ತಿದ್ದಾರೆ. ಪ್ರಕರಣದಲ್ಲಿ ಇಬ್ಬರು IAS ಅಧಿಕಾರಿಗಳಾದ ರಂಗಪ್ಪ, ಬೆಂಗಳೂರು DC ಶ್ರೀನಿವಾಸ್ ಸಸ್ಪೆಂಡ್​​ ಆಗಿದ್ದಾರೆ. ರಂಗಪ್ಪ, BBMP ವಿಶೇಷ ಆಯುಕ್ತರಾಗಿದ್ರು. ಇಬ್ಬರೂ ಸಹ ಬೆಂಗಳೂರು ಕೇಂದ್ರ, ಬೆಂಗಳೂರು ನಗರದ ಚುನಾವಣಾಧಿಕಾರಿಯಾಗಿದ್ರು. ಆದ್ದರಿಂದ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನು ಸಸ್ಪೆಂಡ್​​ ಮಾಡಲಾಗಿದೆ. ಇವರನ್ನು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್​​ ನೀಡಿದ್ರು ಸಹ ಕಾರಣವಿಲ್ಲದೆ 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಹಿರಿಯ ಅಧಿಕಾರಿಗಳ ನಡೆ ಬಹಳ ಅನುಮಾನ ಹುಟ್ಟುಹಾಕಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂವಿಧಾನ ಮೌಲ್ಯವನ್ನು ಅಳವಡಿಸಿ-ಸಿಎಂ ಬಸವರಾಜ್​​ ಬೊಮ್ಮಾಯಿ