Select Your Language

Notifications

webdunia
webdunia
webdunia
Monday, 14 April 2025
webdunia

ಲಾಕ್ ಡೌನ್ ನಲ್ಲಿ ಗುಂಡಿಕ್ಕಿ ಬೇಟೆಯಾಡಿದ ಖದೀಮರು : ಮೂವರು ಅರೆಸ್ಟ್

ಕಡವೆ ಬೇಟೆ
ಕಾರವಾರ , ಶುಕ್ರವಾರ, 1 ಮೇ 2020 (17:07 IST)
ಲಾಕ್ ಡೌನ್ ನಡುವೆ ಬೇಟೆಗೆ ಇಳಿದಿದ್ದ ಮೂವರನ್ನು ಅರಣ್ಯ ಇಲಾಖೆಯವರು ಬಂಧನ ಮಾಡಿದ್ದಾರೆ.

ಕಾರವಾರ ತಾಲೂಕಿನ ಬರ್ಗಲ್ ಅರಣ್ಯ ವಲಯದಲ್ಲಿ ಕಡವೆ ಬೇಟೆಯಾಡಿದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.

ದೇವಳಮಕ್ಕಿ ಗ್ರಾಮದ ರೋಮನ್ ಕಾರಡೋಜ್, ಕೋವೆ ಗ್ರಾಮದ ಆಗ್ನೆಲ್ ಡುಮನಿ ಪೆರೆರಾ ಹಾಗೂ ಬರ್ಗಲ್‌ದ ಕಮಲಾಕರ ಹನುಮಾ ಗೌಡಾ ಬಂಧಿತರು. ಇನ್ನಿಬ್ಬರು ಆರೋಪಿಗಳಾದ ವೈಲವಾಡಾದ ಉಲ್ಲಾಸ ಲಕ್ಷ್ಮಣ ಭಂಡಾರಿ ಹಾಗೂ  ವಿಕ್ಟರ್ ಕಾರಡೋಜ್ ಪರಾರಿಯಾಗಿದ್ದಾರೆ.

ಆರೋಪಿಗಳು ಸುಮಾರು ನಾಲ್ಕು ವರ್ಷದ ಹೆಣ್ಣು ಕಡವೆಯನ್ನು ಗುಂಡು ಹೊಡೆದು ಬೇಟೆಯಾಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ  ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದೇವಾಲಯದ ಅರ್ಚಕರು, ಸಿಬ್ಬಂದಿಗೆ ಆಹಾರ ಕಿಟ್