Publish Date: Wed, 19 Feb 2020 (20:35 IST)
Updated Date: Wed, 19 Feb 2020 (20:36 IST)
ಅಕ್ರಮವಾಗಿ ಲಕ್ಷಾಂತರ ಹಣವನ್ನು ಸಾಗಿಸುತ್ತಿದ್ದ ಆರೋಪಿಗಳಿಬ್ಬರನ್ನು ಬಂಧನ ಮಾಡಲಾಗಿದೆ.
ಕಾರವಾರದ ಶಿರಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ 56 ಲಕ್ಷ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಿದ್ದಾಪುರ ತಾಲೂಕಿನ ಅಬ್ದುಲ್ ಸೌದ ಹಾಗೂ ಅಬ್ದುಲ್ ಮುಥಲಿಪ್ ಬಂಧನಕ್ಕೆ ಒಳಗಾದವರು. ದಾಖಲೆಯಿಲ್ಲದೇ ಕಾರಿನಲ್ಲಿ 56 ಲಕ್ಷ ರೂಪಾಯಿಗಳನ್ನು ಸಾಗಿಸುತ್ತಿದ್ದರು.
ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.