Select Your Language

Notifications

webdunia
webdunia
webdunia
webdunia

ಕಾವೇರಿ ಗಲಾಟೆ: ಕರ್ನಾಟಕ ಬಸ್ ಚಾಲಕ, ನಿರ್ವಾಹಕರ ಮೇಲೆ ತಮಿಳು ಪ್ರತಿಭಟನಾಕಾರರ ಹಲ್ಲೆ

ಕಾವೇರಿ ಗಲಾಟೆ: ಕರ್ನಾಟಕ ಬಸ್ ಚಾಲಕ, ನಿರ್ವಾಹಕರ ಮೇಲೆ ತಮಿಳು ಪ್ರತಿಭಟನಾಕಾರರ ಹಲ್ಲೆ
ಬೆಂಗಳೂರು , ಬುಧವಾರ, 11 ಏಪ್ರಿಲ್ 2018 (09:05 IST)
ಬೆಂಗಳೂರು: ಕಾವೇರಿ ಜಲಮಂಡಳಿ ರಚನೆಯಾಗಬೇಕೆಂದು ಒತ್ತಾಯಿಸಿ ಇಂದು ತಮಿಳುನಾಡಿನಲ್ಲಿ ಮತ್ತೆ ಬಂದ್ ಆಚರಿಸಲಾಗುತ್ತಿದ್ದು, ಕರ್ನಾಟಕದ ಬಸ್ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ.

ಬಂದ್ ಹಿನ್ನಲೆಯಲ್ಲಿ ಇಂದು ತಮಿಳುನಾಡಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಗಿದ್ದರೂ ಈ ಬಸ್ ತಮಿಳುನಾಡಿನ ಕಡಲೂರು ಬಳಿ ಸಂಚರಿಸುತ್ತಿದ್ದ ಅಡ್ಡಗಟ್ಟಿದ ಪ್ರತಿಭಟನಾಕಾರರು ಬಸ್ ಜಖಂ ಗೊಳಿಸಿದ್ದಾರೆ.

ಅಷ್ಟೇ ಅಲ್ಲದೆ, ಬಸ್ ನ ಚಾಲಕ ಮತ್ತು ನಿರ್ವಾಹಕನನ್ನು ಕೆಳಗಿಳಿಸಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಅಲ್ಲಿನ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲವೆಂದು ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರೋ ಏನೋ ಹೇಳಿದ್ರು ಅಂತ ಸುದ್ದಿ ಹಾಕ್ಬಿಡ್ತೀರಾ? ಅಂಬರೀಷ್ ಗರಂ