ಚೆನ್ನೈ: ಕಾವೇರಿ ವಿವಾದ ವಿಚಾರವನ್ನು ಐಪಿಎಲ್ ಪಂದ್ಯ ನಡೆಯುತ್ತಿರುವ ಮೈದಾನದವರೆಗೆ ಕೊಂಡೊಯ್ದ ತವರಿನ ಹೋರಾಟಗಾರರ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಪಂದ್ಯಕ್ಕೂ ಕಾವೇರಿ ವಿವಾದಕ್ಕೂ ಏನು ಸಂಬಂಧ? ಅಷ್ಟಕ್ಕೂ ಕಾವೇರಿ ವಿಚಾರವನ್ನು ರಾಜಕೀಯ ನಾಯಕರೇ ಬಗೆ ಹರಿಸಬೇಕು. ಹೊರತಾಗಿ ಚೆನ್ನೈ ನಾಯಕ ಧೋನಿ ಅಥವಾ ಕ್ರಿಕೆಟಿಗರು ಇದನ್ನು ಸರಿಪಡಿಸಲು ಸಾಧ್ಯವೇ? ಎಂದು ಕೆಲವರು ಛೀಮಾರಿ ಹಾಕಿದ್ದಾರೆ.
ಇನ್ನು ಕೆಲವರು ಕಾವೇರಿ ವಿಚಾರವನ್ನು ಕ್ರಿಕೆಟ್ ಗೆ ಬೆರೆಸಿ ಚೆನ್ನೈನಲ್ಲಿ ಯಾವುದೇ ಕ್ರೀಡೆ ನಡೆಯಲು ಅನುಮತಿ ಸಿಗದಂತೆ ಮಾಡಬೇಡಿ. ಹೀಗೆ ಮಾಡಿದರೆ ನಮ್ಮ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವೇ ಕಳೆದುಕೊಂಡಂತೆ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.