Select Your Language

Notifications

webdunia
webdunia
webdunia
webdunia

ಧೋನಿ ಹೋದಲ್ಲೆಲ್ಲಾ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟಿಗರನ್ನು ಮನರಂಜಿಸಲು ಈ ಹುಡುಗಿಯೂ ಇರ್ತಾಳೆ!

ಧೋನಿ ಹೋದಲ್ಲೆಲ್ಲಾ ಚೆನ್ನೈ ಸೂಪರ್ ಕಿಂಗ್ಸ್  ಕ್ರಿಕೆಟಿಗರನ್ನು ಮನರಂಜಿಸಲು ಈ ಹುಡುಗಿಯೂ ಇರ್ತಾಳೆ!
ಚೆನ್ನೈ , ಬುಧವಾರ, 11 ಏಪ್ರಿಲ್ 2018 (07:31 IST)
ಚೆನ್ನೈ: ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಈ ವರ್ಷ ಐಪಿಎಲ್ ಕಣಕ್ಕೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಭಾರೀ ಖುಷಿಯಲ್ಲಿದ್ದಾರೆ. ಅವರು ಲವ ಲವಿಕೆಯಿಂದಿರಲು ಈ ಹುಡುಗಿಯೂ ಕಾರಣವಾಗಿದ್ದಾಳೆ!

ಹುಡುಗಿ ಎಂದಾಕ್ಷಣ ಅಚ್ಚರಿಪಡಬೇಕಾಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸದ್ಯಕ್ಕೆ ಮನರಂಜನೆ ನೀಡುತ್ತಿರುವ ಈ ಹುಡುಗಿ ನಾಯಕ ಧೋನಿ ಪುತ್ರಿ ಜೀವಾ.

webdunia
ಧೋನಿ ಜತೆಗೆ ಪತ್ನಿ ಸಾಕ್ಷಿ ಮತ್ತು ಜೀವಾ ಕೂಡಾ ಜತೆಯಾಗಿದ್ದಾರೆ. ಚೆನ್ನೈ ತಂಡ ಬೇರೆ ಬೇರೆ ಪಂದ್ಯಗಳಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಬೆಳೆಸುವಾಗ ಜೀವಾ ಕೂಡಾ ಅಪ್ಪನಿಗೆ ಜತೆಯಾಗುತ್ತಿದ್ದಾಳೆ.

ಈ ಸಂದರ್ಭದಲ್ಲಿ ಚೆನ್ನೈ ಆಟಗಾರರನ್ನೆಲ್ಲಾ ತನ್ನ ಫ್ರೆಂಡ್ ಮಾಡಿಕೊಂಡಿದ್ದಾಳೆ. ಹರ್ಭಜನ್ ಸಿಂಗ್ ರಿಂದ ಹಿಡಿದು, ವಿದೇಶೀ ಆಟಗಾರರಾದ ಬ್ರಾವೋ, ಪ್ಲೆಸಿಸ್ ಎಲ್ಲರೂ ಈಗ ಜೀವಾಗೆ ಫ್ರೆಂಡ್ಸ್ ಆಗಿದ್ದಾರೆ. ಇವರೆಲ್ಲರ ಜತೆಗೆ ಆರಾಮವಾಗಿ ಕಾಲ ಕಳೆಯುತ್ತಾ ಚೆನ್ನೈ ತಂಡದ ಕೇಂದ್ರ ಬಿಂದುವಾಗಿದ್ದಾಳೆ ಜೀವಾ.




ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಮತ್ತು ಬಳಗ ಐಪಿಎಲ್ ನಲ್ಲಿ ಬೆವರು ಸುರಿಸುತ್ತಿದ್ದರೆ ಕೋಚ್ ರವಿಶಾಸ್ತ್ರಿ ಏನು ಮಾಡುತ್ತಿದ್ದಾರೆ ಗೊತ್ತೇ?