Publish Date: Wed, 11 Apr 2018 (08:59 IST)
Updated Date: Wed, 11 Apr 2018 (09:00 IST)
ಬೆಂಗಳೂರು: ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಮೇಲೆ ರೆಬಲ್ ಸ್ಟಾರ್ ಅಂಬರೀಷ್ ಒತ್ತಡ ಹಾಕುತ್ತಿದ್ದಾರೆ ಎಂಬ ಕೆಲವು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಅಂಬಿ ಗರಂ ಆಗಿದ್ದಾರೆ.
ಮಂಡ್ಯ ಕಾಂಗ್ರೆಸ್ ನ ಸ್ಥಳೀಯ ನಾಯಕರೊಬ್ಬರು ಅಂಬರೀಷ್ ವಿರುದ್ಧ ಇಂತಹದ್ದೊಂದು ಅಪವಾದ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಬರೀಷ್ ಗರಂ ಆಗಿ ಮಾತನಾಡಿದ್ದಾರೆ.
‘ಮೊದಲು ಟಿಕೆಟ್ ಘೋಷಣೆ ಮಾಡಲಿ. ಈಗಲೇ ಯಾರೋ ಏನೋ ಹೇಳಿದರು ಅಂತ ಸುದ್ದಿ ಹಾಕ್ತೀರಾ? ಎಲ್ಲಾ ಟಿಕೆಟ್ ನಾನೊಬ್ಬನೇ ಕೇಳಕ್ಕೆ ಆಗುತ್ತಾ? ಸಿಎಂ, ಅಧ್ಯಕ್ಷರು, ವೇಣುಗೋಪಾಲ್ ಮಾತಾಡ್ತಾರೆ. ಸ್ಕ್ರೀನಿಂಗ್ ಕಮಿಟಿಯಲ್ಲಿ ಫೈನಲ್ ಆಗುತ್ತೆ. ಮೊದಲು ಟಿಕೆಟ್ ಬರಲಿ ಆಮೇಲೆ ಮಾತಾಡ್ತೀನಿ. ಈಗ ಚುನಾವಣೆ ಮೊದಲಿನಷ್ಟು ಸರಳ ಅಲ್ಲ’ ಎಂದು ಅಂಬರೀಷ್ ಕಿಡಿ ಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.