ಟೀ ಕುಡಿಯೋಕೆ ಬಂದು ಆ್ಯಕ್ಸಿಡೆಂಟ್, ಭಾವ ಸಾವು, ಬಾಮೈದಗೆ ಗಾಯ

Webdunia
ಸೋಮವಾರ, 10 ಜುಲೈ 2023 (19:40 IST)
ಅತಿಯಾದ ಚಾಲನೆಯಿಂದ ಫ್ಲೈಓವರ್ ನ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ರೆ ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರೋ ಘಟನೆ ಬನಶಂಕರಿ ಸಂಚಾರಿ ಠಾಣಾ ವ್ಯಾಪ್ತಿಯ ದೇವೆಗೌಡ ಪೆಟ್ರೋಲ್‌ಬಂಕ್ ಬಳಿ ನಡೆದಿದೆ.. ಫ್ಲೈ ಓವರ್ ಮೇಲೆ ನಡೆದ ಅಪಘಾತದಲ್ಲಿ 29ವರ್ಷದ ರಾಮ್ ಕುಮಾರ್ ಸಾವನ್ನಪ್ಪಿದ್ರೆ, 22ವರ್ಷದ ಯಶವಂತ್ ಗಂಭೀರ ಗಾಯಗಳಾಗಿ ಖಾಸಗಿ ಆಸ್ಪತ್ರೆ ಸೇರಿದ್ದಾರೆ.

ಅಂದ್ಹಾಗೆ ಮೃತ ರಾಮ್ ಕುಮಾರ್ ಮತ್ತು ಗಾಯಾಳು ಯಶವಂತ್ ಇಬ್ಬರೂ ಭಾವ ಬಾಮೈದ. ಯಶವಂತ್ ಅಕ್ಕನನ್ನ ರಾಮ್ ಕುಮಾರ್ ಮದುವೆಯಾಗಿದ್ದ.. ಬ್ಯಾಟರಾಯನಪುರದ ಪ್ರಮೋದ್ ಲೇಔಟ್ ನಲ್ಲಿ ವಾಸ ಮಾಡ್ತಿದ್ರು. ಖಾಸಗಿ ಕಂಪನೀಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದ ರಾಮ್ ಕುಮಾರ್ ತನ್ನ ಬಾಮೈದ ಯಶವಂತ್ ಜೊತೆ ಸ್ನೇಹಿತನಂತೆ ಇದ್ದ. ಹೀಗೆ ಸಮಾನ್ಯವಾಗಿ ಫ್ರೆಂಡ್ಶಿಪ್ ಮೆಂಟೇನ್ ಮಾಡ್ತಿದ್ದ ಬಾವ ಬಾಮೈದ ಆಗಾಗ ತಡರಾತ್ರಿ ಹೊರಗಡೆ ಸುತ್ತಾಡ್ತಿದ್ರು. ಟೀ ಕಾಫಿ, ಎಣ್ಣೆ ಪಾರ್ಟಿ ಅಂತಾ ಹೋಗ್ತಿದ್ರು. ಹೀಗೆ ನಿನ್ನೆ ರಾತ್ರಿ 2ಗಂಟೆ ಸುಮಾರಿಗೆ ಟೀ ಕುಡಿಯೋಕೆ ಬರ್ತೀನಿ ಅಂತಾ ಪತ್ನಿಗೆ ಹೇಳಿದ್ದ ರಾಮ್ ಕುಮಾರ್ ಬಾಮೈದನ ಜೊತೆ ಎನ್ ಎಸ್ ಪಲ್ಸರ್ ಬೈಕ್ ಹತ್ತಿ ಬಂದಿದ್ದ. ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ಫ್ಲೈ ಓವರ್ ಮೇಲೆ ಗಾಡಿ ಓಡಿಸ್ತಿದ್ರು.‌. ಯಂಗ್ ಸ್ಟರ್ ಯಶವಂತ್ ಕೊಂಚ ಹೆಚ್ಚೇ ಸ್ಪೀಡಾಗಿ ಬೈಕ್ ಓಡಿಸಿದ್ದಾನೆ. ಈ ವೇಳೆ ಗಾಡಿ ಫುಲ್ ಕಂಟ್ರೋಲ್ ಸಿಗದೆ ಫ್ಲೈಓವರ್ ನ ತಡೆಗೋಡೆ ಡಿಕ್ಕಿಯಾಗಿ ಅಪಘಾತವಾಗಿದೆ.‌. ಪರಿಣಾಮ ಗಾಡಿಯ ಹಿಂಬದಿ ಕುಳಿತ್ತಿದ್ದ ರಾಮ್ ಕುಮಾರ್  ಫ್ಲೈ ಓವರ್ ನ 30 ಅಡಿ ಮೇಲಿನಿಂದ ಕೆಳಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಯಶವಂತ್ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments