Select Your Language

Notifications

webdunia
webdunia
webdunia
webdunia

ಸಿಎಎ, ಎನ್ಆರ್‌ಸಿ ಕಾಯ್ದೆ ವಿರೋಧಿಸಿ-ಪ್ರತಿಭಟನೆ

bangalore
bangalore , ಗುರುವಾರ, 8 ಜುಲೈ 2021 (14:13 IST)
ಸಿಎಎ, ಎನ್ಆರ್‌ಸಿ ಕಾಯ್ದೆ ವಿರೋಧಿಸಿ 2019ರಲ್ಲಿ ಮಂಗಳೂರಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಮತ್ತು ಪೊಲೀಸ್ ಕುಟುಂಬದ ಮಾನಹಾನಿಗೈಯ್ಯುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಆರೋಪದಡಿಯಲ್ಲಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಗ್ರಾಮದ ಯೋಗಿ ಯಾನೆ ಯೋಗೇಶ್ ಯಾನೆ ಯೋಗೇಶ್ ಎಸ್, ಬಂಧಿತ ಆರೋಪಿ. ಈತನನ್ನು ಮಂಗಳೂರಿನ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ‌.
ಆರೋಪಿ ಯೋಗೀಶ್ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಪೊಲೀಸರ ವಿರುದ್ಧ ಬರೆಯುತ್ತಿದ್ದ. ಈ ಬಗ್ಗೆ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಮಾರು ಎರಡೂವರೆ ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮನಗರ: ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರಹಾಕಿದ ಮಗ!