ಅಶ್ವತ್ಥ್ ನಾರಾಯಣ​​ ಹೇಳಿಕೆಗೆ C.M ಇಬ್ರಾಹಿಂ ಖಂಡನೆ

Webdunia
ಗುರುವಾರ, 16 ಫೆಬ್ರವರಿ 2023 (17:54 IST)
ಮಂಡ್ಯದ ಸಾತನೂರು ಗ್ರಾಮದಲ್ಲಿ BJP ಕಾರ್ಯಕರ್ತರ ಸಭೆ ವೇಳೆ ಮಾತನಾಡಿದ್ದ ಸಚಿವ ಡಾ. ಅಶ್ವತ್ಥ್​​ ನಾರಾಯಣ, ಟಿಪ್ಪು ರೀತಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂದು ಕಾರ್ಯಕ್ರತರಿಗೆ ಹೇಳಿದ್ರು. ಈ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕಿಡಿ ಹೊತ್ತಿಸಿದೆ. ಅಶ್ವತ್ಥ್​​ ನಾರಾಯಣರ ಹೇಳಿಕೆಗೆ ಕಾಂಗ್ರೆಸ್​ ಪಕ್ಷ ಸೇರಿದಂತೆ JDSನಿಂದಲೂ ಆಕ್ಷೇಪ ವ್ಯಕ್ತವಾಗ್ತಿದೆ. ಈ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ JDS ರಾಜ್ಯಾಧ್ಯಕ್ಷ C.M ಇಬ್ರಾಹಿಂ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಧಾನಸಭೆಯಲ್ಲಿ ಟಿಪ್ಪು ಬಗ್ಗೆ ಗುಣಗಾನ ಮಾಡಿದ್ರು. ಅವರನ್ನು ಹಿಡ್ಕೊಂಡು ಹೊಡಿತಿರಾ ನೀವು? ಎಂದು BJPಯವರನ್ನು ಪ್ರಶ್ನಿಸಿದ್ದಾರೆ. ಚುನಾವಣಾ ಬಗ್ಗೆ ಮಾತನಾಡೋಕೆ ಎಷ್ಟು ವಿಷಯಗಳಿದೆ. ರೈತರ ಸಮಸ್ಯೆ, ನೀರಾವರಿ ಯೋಜನೆ, ಶಿಕ್ಷಣ ಹೀಗೆ ಹಲವು ವಿಚಾರಗಳಿದೆ. ಆದರೆ BJP ಅದನ್ನು ಬಿಟ್ಟು ಇಂತಹ ಹೇಳಿಕೆ ಕೊಡ್ತಾರೆ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಬೇರೆ ಪಾರ್ಟಿ ಇರಬಹುದು. ಆದ್ರೆ ಅವರು ವಿಪಕ್ಷ ನಾಯಕರು. ಡಿಜಿ ಅವ್ರು ಸುಮುಟೋ ಕೇಸ್ ದಾಖಲಿಸಿದ್ರೆ ಒಂದು ತೂಕ ಬರುತ್ತದೆ ಎಂದು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments