Select Your Language

Notifications

webdunia
webdunia
webdunia
Sunday, 13 April 2025
webdunia

ಬೈ ಎಲೆಕ್ಷನ್: ನನಗೂ ಕಾಂಗ್ರೆಸ್ ಟಿಕೆಟ್ ನೀಡಿ

ಕಾಂಗ್ರೆಸ್
ಹುಬ್ಬಳ್ಳಿ , ಶುಕ್ರವಾರ, 26 ಏಪ್ರಿಲ್ 2019 (16:53 IST)
ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕೈ ಪಾಳೆಯದಲ್ಲಿ ತೀವ್ರ ಪೈಪೋಟಿ ಕಂಡುಬರುತ್ತಿದೆ.
ನಾನು ಆಕಾಂಕ್ಷಿ ಆಗಿದ್ದು, ಈ ಕಾರಣದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸಿದ್ದು ನಾನು ಕಾಂಗ್ರೆಸ್ ಟಿಕೆಟ್ ನ ಪ್ರಬಲ ಆಕಾಂಕ್ಷಿ ಎಂದು ಯಲ್ಲಪ್ಪ ಬಿಸೇರೊಟ್ಟಿ ಹೇಳಿದರು. 

ಹುಬ್ಬಳ್ಳಿ ನಗರದಲ್ಲಿಂದು ಮಾತನಾಡಿದ ಅವರು, ಮೇ 19 ರಂದು ಕುಂದಗೋಳ ಉಪಚುನಾವಣೆ ನಡೆಯಲಿದ್ದು, ನಾನು ಸ್ಪರ್ಧಿಸುವ ಆಸೆ ಹೊಂದಿದ್ದೇನೆ. ದಿ. ಮಾಜಿ ಮುಖ್ಯಮಂತ್ರಿಗಳಾದ ವಿರೇಂದ್ರ ಪಾಟೀಲ, ಎಸ್. ಬಂಗಾರಪ್ಪ, ಮಾಜಿ ವಿದೇಶಾಂಗ ಮಂತ್ರಿ ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂತಾದ ಹಿರಿಯ ಗಣ್ಯರ ಒಡನಾಡಿಯಾಗಿ ಹಳೆಯ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಕಳೆದ ಮೂರು ದಶಕಗಳಿಂದ ತೊಡಗಿಕೊಂಡಿದ್ದೇನೆ.

ಪಕ್ಷ ಸಂಘಟನೆ, ಅಭಿವೃದ್ಧಿ ಮಾಡುವಲ್ಲಿ ದುಡಿದಿದ್ದೇನೆ. ಕಾಂಗ್ರೆಸ್ ಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದೇನೆ ಎಂದರು‌.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡ್ರು ಗೆದ್ದರೆ ಪರಮೇಶ್ವರ್ ಸಿಎಂ: ಆಡಿಯೋ ವೈರಲ್