Publish Date: Fri, 29 Nov 2019 (07:34 IST)
Updated Date: Fri, 29 Nov 2019 (07:36 IST)
ಮೈಸೂರು : ಹುಣಸೂರು ಕ್ಷೇತ್ರದ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿಗೆ ತೀವ್ರ ಹೃದಯಾಘಾತವಾಗಿ ಕುಸಿದುಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಣಸೂರಿನ ಕುಲ್ಕಣೆ ಉಮೇಶ್ ಎಂಬುವವರು ಹುಣಸೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಪ್ರಚಾರ ಕಾರ್ಯದಿಂದ ಆಯಾಸಗೊಂಡಿದ್ದ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮೈಸೂರಿನ ಜಯದೇವ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಹುಣಸೂರು ಉಪಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಚ್.ವಿಶ್ವನಾಥ್, ಕಾಂಗ್ರೆಸ್ ನಿಂದ ಎಚ್.ಪಿ.ಪಾಟೀಲ್, ಜೆಡಿಎಸ್ ನಿಂದ ಸೋಮಶೇಖರ್ ಕಣಕ್ಕೀಳಿಯುತ್ತಿದ್ದಾರೆ.