Publish Date: Wed, 13 Feb 2019 (14:26 IST)
Updated Date: Wed, 13 Feb 2019 (14:28 IST)
ಗ್ರಾಹಕರು ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡಿ ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಫ್ಲಿಫ್ ಕಾರ್ಟ್ ಆನ್ ಲೈನ್ ಕಂಪನಿಯಿಂದ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ವೀವೊ ಮೊಬೈಲ್ ಬದಲಾಗಿ ಗ್ರಾಹಕರಿಗೆ ಬಟ್ಟೆ ಸೋಪು ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ವಿಜಯ್ ಕುಮಾರ್ ಎಂಬುವರು ಆನ್ ಲೈನ್ ಕಂಪನಿಯಿಂದ ವಂಚನೆಗೊಳಗಾದವರಾಗಿದ್ದಾರೆ. ಬುಕ್ಕಿಂಗ್ ಮಾಡಿದ್ದ ಕೋರಿಯರ್ ಕಂಪನಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
26,000 ರೂಪಾಯಿ ಬೆಲೆಯ ವೀವೊ ವಿ11 ಮೊಬೈಲ್ ಬದಲಾಗಿ ಡಿಟರ್ಜೆಂಟ್ ಸೋಪು ಕಳಿಸಿ ಕಂಪನಿ ವಂಚನೆ ಮಾಡಿದೆ ಎಂದು ದೂರಲಾಗಿದ್ದು, ಆತಂಕದಲ್ಲಿ ವಿಜಯ್ ಕುಮಾರ್ ಇದ್ದಾರೆ.