Select Your Language

Notifications

webdunia
webdunia
webdunia
webdunia

ಗ್ರಾಹಕರೇ ಆನ್‍ಲೈನ್ ನಲ್ಲಿ ವಸ್ತುಗಳನ್ನು ಖರೀದಿಸುವ ಮುನ್ನ ಎಚ್ಚರ; ಮೊಬೈಲ್ ಆರ್ಡರ್ ಮಾಡಿದರೆ ಬಂದಿದ್ದೇನು ಗೊತ್ತಾ?

ಗ್ರಾಹಕರೇ ಆನ್‍ಲೈನ್ ನಲ್ಲಿ ವಸ್ತುಗಳನ್ನು ಖರೀದಿಸುವ ಮುನ್ನ ಎಚ್ಚರ; ಮೊಬೈಲ್ ಆರ್ಡರ್ ಮಾಡಿದರೆ ಬಂದಿದ್ದೇನು ಗೊತ್ತಾ?
ಬೆಂಗಳೂರು , ಬುಧವಾರ, 30 ಜನವರಿ 2019 (10:49 IST)
ಬೆಂಗಳೂರು : ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ ಗ್ರಾಹಕನೊಬ್ಬನಿಗೆ ಸರ್ಫ್ ಎಕ್ಸೆಲ್ ಸೋಪ್ ಕೊಟ್ಟು ಆನ್‍ಲೈನ್ ಕಂಪನಿಯೊಂದು ವಂಚನೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


ವೆಂಕಟೇಶ್ ಎಂಬುವರು ವಂಚನೆಗೆ ಒಳಗಾದ ವ್ಯಕ್ತಿ. ಬೆಂಗಳೂರಿನ ಉತ್ತರಹಳ್ಳಿ ನಿವಾಸಿಯಾಗಿರುವ ಇವರು ಆನ್ ಲೈನ್ ನಲ್ಲಿ ಸ್ಯಾಮ್‍ ಸಂಗ್ ನೋಟ್ 9  ಮೊಬೈಲ್ ಆರ್ಡರ್ ಮಾಡಿದ್ದರು. ನಂತರ ಮನೆಗೆ ಬಂದ ಡೆಲಿವರಿ ಬಾಯ್ ಗೆ ಪೇಟಿಯಂ ನಲ್ಲಿ 85 ಸಾವಿರ ಹಣ ಪಾವತಿಸಿ ಸ್ಯಾಮ್‍ ಸಂಗ್ ನೋಟ್ 9 ಮೊಬೈಲ್ ಖರೀದಿ ಮಾಡಿದ್ದರು.


ಆದರೆ ವೆಂಕಟೇಶ್ ಬಾಕ್ಸ್ ಓಪನ್ ಮಾಡಿ ನೋಡಿದ್ದಾಗ ಅದರಲ್ಲಿ ಮೊಬೈಲ್ ಬದಲು 5 ರೂ. ಸರ್ಫ್ ಎಕ್ಸೆಲ್ ಸೋಪು ಇತ್ತು. ಈ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಕ್ಕಳು ಬೇಕೆಂಬ ಹಂಬಲದಿಂದ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?