Publish Date: Wed, 19 Oct 2022 (19:47 IST)
Updated Date: Wed, 19 Oct 2022 (19:52 IST)
ಮಳೆ ಅವಾಂತರ ಹಳ್ಳದಲ್ಲಿ ಖಾಸಗಿ ಬಸ್ ಸಿಲುಕಿಕೊಂಡ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಾಪುರದಲ್ಲಿ ನಡೆದಿದೆ. ಪಾವಗಡದಿಂದ ಹಿಂದೂಪುರಕ್ಕೆ ತೆರಳುತ್ತಿದ್ದ BST ಬಸ್ ಹಳ್ಳದಲ್ಲಿ ಸಿಲುಕಿದ ಸುಮಾರು 50ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಮೇಲೆ ಹಳ್ಳದ ನೀರು ಹರಿದಿದ್ದು, ಹಳ್ಳದ ಮೂಲಕ ಸಂಚರಿಸುವ ವಾಹನಗಳಿಗೆ ಗ್ರಾಮಸ್ಥರು ನಿರ್ಬಂಧ ವಿಧಿಸಿದ್ದಾರೆ. ಗ್ರಾಮಸ್ಥರ ಮನವರಿಕೆಗೂ ಕಿವಿಕೊಡದೆ ಹಳ್ಳದಲ್ಲಿ ಡ್ರೈವರ್ ಬಸ್ ಚಲಾಯಿಸಿದ್ದರಿಂದ ಬಸ್ ಹಳ್ಳದಲ್ಲಿ ಸಿಲುಕುವಂತಾಯಿತು. ಹಳ್ಳದ ನೀರಲ್ಲಿ ಸಿಲುಕಿದ ಬಸ್‌ನ್ನು ಜೆಸಿಬಿ ಸಹಾಯದ ಮೂಲಕ ಸ್ಥಳಿಯರು ಹೊರತೆಗೆದಿದ್ದಾರೆ.