Select Your Language

Notifications

webdunia
webdunia
webdunia
webdunia

ಭಾರೀ ಮಳೆಗೆ ಮನೆಗೋಡೆ ಕುಸಿತ

ಭಾರೀ ಮಳೆಗೆ ಮನೆಗೋಡೆ ಕುಸಿತ
ಮಂಡ್ಯ , ಬುಧವಾರ, 19 ಅಕ್ಟೋಬರ್ 2022 (19:30 IST)
ಮಳೆ ಅವಾಂತರ ಮತ್ತಷ್ಟು ಮುಂದುವರೆದ ಹಿನ್ನೆಲೆ ತಡರಾತ್ರಿ ಸುರಿದ ಭಾರಿ ಮಳೆಯಿಂದ ಎರಡು ಮನೆಗಳು ಕುಸಿದಿದೆ. ಈ ಘಟನೆ ಮಂಡ್ಯ ತಾಲೂಕು ದುದ್ದ ಹೋಬಳಿಯ ಸೌದೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಕೃಷ್ಣ ಹಾಗೂ ಧರ್ಮಾನಂದ ಎಂಬುವವರಿಗೆ ಮನೆಗಳು ಸೇರಿದ್ದು. ಧಾರಾಕಾರ ಮಳೆಗೆ ಏಕಾಏಕಿ ಮನೆಗಳು ಕುಸಿದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಮನೆ ಕುಸಿದ ಪರಿಣಾಮ ರಾತ್ರಿ ಇಡೀ ಬೀದಿಯಲ್ಲೇ ಕುಟುಂಬಸ್ಥರು ಕಾಲ ಕಳೆದಿದ್ದಾರೆ. ಇನ್ನೂ ಮಳೆಗೆ ಗ್ರಾಮದ ಹಲವೆಡೆ ಜಮೀನು ಮುಳುಗಡೆಯಾಗಿದ್ದು ಭತ್ತ, ಕಬ್ಬು ಬೆಳೆಗಳು ಜಲಾವೃತವಾಗಿ ರೈತರು ಕಂಗಾಲಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ಪೋರ್ಟ್ ರಸ್ತೆಲಿ ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದು ಯುವಕನ ಕೈಕಟ್