ಬೆಂಗಳೂರು; ಮೊಟ್ಟೆ ದಾಳಿ ಹಿನ್ನೆಲೆಯಲ್ಲಿ ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೀಗ ಮುನಿರತ್ನ ಅವರ ಆರೋಗ್ಯ ವಿಚಾರಿಸಲು ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಸಂಸದ ಡಾ ಮಂಜುನಾಥ್ ಸಹ ಆಸ್ಪತ್ರೆಗೆ ಭೇಟಿ ನೀಡಿ ಮುನಿರತ್ನ ಅವರ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಮುನಿರತ್ನ ನಾಯ್ಡು ತಲೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ. ಕೆಮಿಕಲ್ ಮಾದರಿಯ ಪದಾರ್ಥದಿಂದ ಅವರಿಗೆ ಹೊಡೆದಿದ್ದಾರೆ. ಇದರಿಂದ ತಲೆ ಸುತ್ತು, ವಾಂತಿ ಬಂದಂತೆ ಆಗುತ್ತಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊಟ್ಟೆ ದಾಳಿಯಿಂದ ಮುನಿರತ್ನ ಕೂದಲು ಸ್ವಲ್ಪ ಬರ್ನ್ ಆಗಿದೆ. ಹಲವು ತಿಂಗಳಿಂದ ಕೆಲವು ರಾಜಕೀಯ ಘಟನೆಗಳನ್ನು ನೋಡಿದ್ರೆ ಮುನಿರತ್ನ ನಾಯ್ಡುಗೆ ಟಾರ್ಗೆಟ್ ಮಾಡುತ್ತಿದ್ದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ರಾಜಕೀಯ ಮಾಡಬೇಕು ಎಂದರು.
ಮುನಿರತ್ನ ಪೆಟ್ಟು ಬಿದ್ದ ಜಾಗದಲ್ಲಿ ಸ್ವಲ್ಪ ಕೂದಲು ಬರ್ನಿಂಗ್ ಆದ ಕಾರಣ ಸಿಟಿ ಸ್ಕ್ಯಾನ್ ಮಾಡಲು ವೈದ್ಯರಿಗೆ ಹೇಳಿದ್ದೇನೆ ಎಂದರು.