Select Your Language

Notifications

webdunia
webdunia
webdunia
webdunia

ಸಂಸತ್‌ ಭವನದ ಬಳಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಸ್ಥಿತಿ ಗಂಭೀರ

Delhi Parliment+suicide

Sampriya

ನವದೆಹಲಿ , ಬುಧವಾರ, 25 ಡಿಸೆಂಬರ್ 2024 (18:28 IST)
Photo Courtesy X
ನವದೆಹಲಿಯ ಸಂಸತ್ ಭವನದ ಬಳಿ ಬುಧವಾರ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಕ್ಷಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು  ವೈದ್ಯಕೀಯ ಚಿಕಿತ್ಸೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಾಯಿತು.

ರೈಲ್ ಭವನ ವೃತ್ತದಲ್ಲಿ ಈ ಘಟನೆ ನಡೆದಿದೆ. ಪ್ರದೇಶವನ್ನು ಸುತ್ತುವರಿದಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ.

ಸ್ಥಳೀಯ ಪೊಲೀಸರು, ರೈಲ್ವೇ ಪೊಲೀಸರು ಮತ್ತು ಕೆಲವು ನಾಗರಿಕರು ತ್ವರಿತವಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಮತ್ತು ವ್ಯಕ್ತಿಯನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಪ್ರಾಥಮಿಕ ವರದಿಯ ಪ್ರಕಾರ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ನಡೆಸಿರಬಹುದು ಎನ್ನಲಾಗಿದೆ.  ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವ್ಯಕ್ತಿ ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಆಗಿರಬಹುದು ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ. ಆದಾಗ್ಯೂ, ನಿಖರವಾದ ಗುರುತನ್ನು ಇನ್ನೂ ದೃಢೀಕರಿಸಬೇಕಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಜರ್‌ಬೈಜಾನ್‌ನ ವಿಮಾನ ರಷ್ಯಾದಲ್ಲಿ ಪತನ: ನಾಲ್ವರು ಸಾವು, 29ಮಂದಿ ಪ್ರಾಣಪಾಯದಿಂದ ಪಾರು