Publish Date: Sat, 19 Oct 2024 (17:01 IST)
Updated Date: Sat, 19 Oct 2024 (17:07 IST)
ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿ, ಇದೀಗ ಸಂಸದರಾಗಿರುವ ಡಾ. ಸಿಎನ್ ಮಂಜುನಾಥ್ ಅವರು ಫಿಟ್ಸ್ ಕಾಣಿಸಿಕೊಂಡ ಸವಾರನೊಬ್ಬನಿಗೆ ಮಾರ್ಗಮಧ್ಯದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಭಾರೀ ಮೆಚ್ಚುಗೆ ಪಾತ್ರರಾಗಿದ್ದಾರೆ.
ರಸ್ತೆಯಲ್ಲೇ ಫಿಡ್ಸ್‌ಗೆ ತುತ್ತಾಗಿದ್ದ ರೋಗಿಯೊಬ್ಬರನ್ನು ಕಂಡು ಬೆಂಗಳೂರು ಗ್ರಾಮಾಂತರದ ಸಂಸದ ಸಿಎನ್ ಮಂಜುನಾಥ ಅವರು ತಮ್ಮ ವಾಹನದಿಂದ ಇಳಿದು ಆತನ ಆರೋಗ್ಯವನ್ನು ವಿಚಾರಿಸಲು ಹೋಗಿದ್ದಾರೆ.
ಈ ವೇಳೆ ಆತನನ್ನು ಪರೀಕ್ಷಿಸಿ, ಧೈರ್ಯ ಹೇಳಿದ್ದಾರೆ. ನೆರೆದಿದ್ದವರ ಬಳಿ ಕೂಡಾ ಫಿಡ್ಸ್ ಬರುವ ವ್ಯಕ್ತಿಯನ್ನು ಹಿಂದೆ ಕೂರಿಸಿ, ಬೈಕ್ ಓಡಿಸಿ ಎಂದು ಸಲಹೆ ನೀಡಿದ್ದಾರೆ. ಸದ್ಯ ಡಾ.ಮಂಜುನಾಥ ಅವರ ಸರಳತೆಗೆ ಜನರ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ಡಾ.ಸಿಎನ್ ಮಂಜುನಾಥ್ ಅವರು ತಮ್ಮ ಸರಳತೆ ಹಾಗೂ ಪ್ರಾಮಾಣಿಕತೆಯಿಂದ ಜನಸಾಮಾನ್ಯರ ಮೆಚ್ಚುಗೆ ಪಾತ್ರರಾಗಿದ್ದಾರೆ. ಜನರೊಡನೆ ನೇರವಾಗಿ ಒಡನಾಟ ಇಟ್ಟುಕೊಂಡಿದ್ದಾರೆ.