Select Your Language

Notifications

webdunia
webdunia
webdunia
Sunday, 6 April 2025
webdunia

ಚನ್ನಪಟ್ಟಣ ಟಿಕೆಟ್ ಫೈಟ್: ಕುಮಾರಸ್ವಾಮಿ ದೊಡ್ಡ ಮನಸ್ಸು ಮಾಡ್ಮೇಕೆಂದ ಬಸನಗೌಡ ಪಾಟೀಲ್

Channapattana By Election

Sampriya

ಹುಬ್ಬಳ್ಳಿ , ಶನಿವಾರ, 19 ಅಕ್ಟೋಬರ್ 2024 (16:12 IST)
ಹುಬ್ಬಳ್ಳಿ: ಚನ್ನಪಟ್ಟಣ  ಉಪಚುನಾವಣೆ ಟಿಕೆಟ್ ಫೈಟ್ ಜೋರಾಗುತ್ತಿದ್ದ ಹಾಗೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್‌ ಪಕ್ಷಕ್ಕೆ ನಾವು ಪುನರ್ಜನ್ಮ ನೀಡಿದ್ದೇವೆ. ಹೀಗಾಗಿ ಹೆಚ್.ಡಿ ಕುಮಾರಸ್ವಾಮಿ ಚನ್ನಪಟ್ಟಣ ಟಿಕೆಟ್ ತ್ಯಾಗ ಮಾಡಲಿ ಎಂದು ಅಗ್ರಹಿಸಿದ್ದಾರೆ.

ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಎರಡೂ ಪಕ್ಷಕ್ಕೆ ಲಾಭವಾಗಿದೆ. ಇದೀಗ ನಮಗೆ ಹೆಚ್.ಡಿ ಕುಮಾರಸ್ವಾಮಿ ಸಹಾಯಬೇಕು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಶಕ್ತಿ ಬೇಕು. ನಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬುದು ಮುಖ್ಯ. ನಾವು ಜೆಡಿಎಸ್ ಗೆ ಪುನರ್ಜನ್ಮ ಕೊಟ್ಟಿದ್ದೇವೆ.

ಹೀಗಾಗಿ ಕುಮಾರಸ್ವಾಮಿ ಟಿಕೆಟ್ ತ್ಯಾಗ ಮಾಡಬೇಕು, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆ ಎನ್ ಡಿಎ ಟಿಕೆಟ್ ನೀಡಬೇಕು ಎಂದು ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ದೊಡ್ಡ ಹೃದಯ ಪ್ರದರ್ಶಿಸಿ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣ ಅಭ್ಯರ್ಥಿ ಕುರಿತು ಕುಮಾರಸ್ವಾಮಿ ಜೊತೆ ಚರ್ಚಿಸಲು ಸಮಯ ಸಿಕ್ಕಿಲ್ಲ ಎಂದ ವಿಜಯೇಂದ್ರ