Publish Date: Thu, 29 Aug 2024 (19:38 IST)
Updated Date: Thu, 29 Aug 2024 (19:41 IST)
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಂಗ್ರೆಸ್ ಪೋಸ್ಟ್ ಹಾಕಿ ಬಿಜೆಪಿಯವರನ್ನು ಕಾಲೆಳೆದಿದೆ.
"ಸತ್ಯಮೇವ ಜಯತೆ"
ಕಾಂಗ್ರೆಸ್ ಪಕ್ಷದ ಸತ್ಯಕ್ಕೆ ಎಂದಿಗೂ ಜಯವಿರುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳು ಕಂಡುಬರುತ್ತಿದೆ.
ಕೆ.ಜೆ ಜಾರ್ಜ್ ಅವರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ,ಈಗ ಬಿಜೆಪಿಯ ರಾಜಕೀಯ ದುರುದ್ದೇಶಕ್ಕೆ ಸೋಲಾಗಿದೆ,
ಡಿ. ಕೆ ಶಿವಕುಮಾರ್ ಅವರ ವಿರುದ್ದ ತನಿಖೆ ನಡೆಸುವ ನಿರ್ಧಾರವನ್ನು ಹಿಂಪಡೆದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿಯ ಬಸನಗೌಡ ಹಾಗೂ ಸಿಬಿಐ ಸಲ್ಲಿಸಿದ್ದ ಆಕ್ಷೇಪಣೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಡಿಯರ್ ಬಿಜೆಪಿಯವರೇ, ಸತ್ಯಕ್ಕೆ ತಾತ್ಕಾಲಿಕ ಹಿನ್ನೆಡೆ ಇರಬಹುದು ಆದರೆ ಸತ್ಯಕ್ಕೆ ಸಾವಿಲ್ಲ ಎನ್ನುವುದನ್ನು ಮರೆಯದಿರಿ.
ಬಿಜೆಪಿಯ ಎಲ್ಲಾ ಸುಳ್ಳಿನ ಆರೋಪಗಳನ್ನೂ "ಸತ್ಯ"ವು ಸೋಲಿಸಲಿದೆ ಎಂದು ಬರೆದುಕೊಂಡಿದ್ದಾರೆ.