Publish Date: Mon, 05 Sep 2022 (14:04 IST)
Updated Date: Mon, 05 Sep 2022 (14:26 IST)
ಬಿಟೌನ್ ಸ್ಟಾರ್ ದಂಪತಿ ಜೆನಿಲಿಯಾ ರಿತೇಶ್, ಹ್ಯಾಟ್ರಿಕ್ ಹೀರೋ ನಿವಾಸಕ್ಕೆ ಭೇಟಿ ಕೊಟ್ಟಿದ್ದೇಕೆ ಗೊತ್ತಾ.? ಗಾಲಿ ಜನಾರ್ಧನ ರೆಡ್ಡಿಯ ಏಕಮಾತ್ರ ಪುತ್ರ, ಕಿರೀಟಿಯ ಸಿನಿಮಾಗಾಗಿ. ಹೌದು, ಕನ್ನಡ ಚಿತ್ರರಂಗದ ಭರವಸೆ ನಾಯಕ ನಟನಾಗೋ ಮುನ್ಸೂಚನೆ ಕೊಟ್ಟಿರೋ ಕಿರೀಟಿ ಚಂದನವನದ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಕಿರೀಟಿ ಸಿನಿಮಾದ ಶೂಟಿಂಗ್ ಶಿವರಾಜ್ ಕುಮಾರ್ ನಿವಾಸ ಇರೋ ಮಾನ್ಯತಾ ಟೆಕ್ಪಾರ್ಪ್‌ನಲ್ಲೇ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜೆನಿಲಿಯಾ ಕೂಡ ನಟಿಸುತ್ತಿದ್ದು, ಶೂಟಿಂಗ್ ಬಿಡುವಿನ ವೇಳೆ ಜೆನಿಲಿಯಾ ದಂಪತಿ ಸೆಂಚುರಿ ಸ್ಟಾರ್ ಮನೆಗೆ ವಿಸಿಟ್ ಮಾಡಿ, ಶಿವಣ್ಣನ ಆಥಿತ್ಯ ಸ್ವೀಕರಿಸಿದ್ದಾರೆ.