Select Your Language

Notifications

webdunia
webdunia
webdunia
Tuesday, 1 April 2025
webdunia

ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ!

ಮುರುಘಾ ಮಠ
ಚಿತ್ರದುರ್ಗ , ಸೋಮವಾರ, 5 ಸೆಪ್ಟಂಬರ್ 2022 (08:52 IST)
ಚಿತ್ರದುರ್ಗ : ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
 
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 3ನೇ ಆರೋಪಿ ಮಠದ ಮರಿಸ್ವಾಮಿ ಬಸವಾದಿತ್ಯರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುರುಘಾ ಮಠದ ಮರಿಸ್ವಾಮಿ ಬಸವಾದಿತ್ಯರನ್ನ ಪೊಲೀಸರು ಹೊಸಪೇಟೆಯಲ್ಲಿ ವಶಕ್ಕೆ ಪಡೆದಿದ್ದು, ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಕರೆತರಲಾಗುತ್ತಿದೆ. ಚಿತ್ರದುರ್ಗ ಗ್ರಾಮೀಣ ಠಾಣೆಗೆ ಕರೆತಂದ ನಂತರ ಬಂಧನದ ಪ್ರಕ್ರಿಯೆಯನ್ನು ಪೊಲೀಸರು ಪೂರ್ಣಗೊಳಿಸಲಿದ್ದಾರೆ. 

ಪೋಕ್ಸೋ ಕೇಸ್ನಲ್ಲಿ ಶುಕ್ರವಾರದಿಂದ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾ ಶ್ರೀಗಳನ್ನು ಇಂದು ತನಿಖಾ ತಂಡ ವಿಚಾರಣೆಗೆ ಒಳಪಡಿಸಿತ್ತು. ಆದರೆ ಶ್ರೀಗಳು ತನಿಖೆಗೆ ಸಹಕರಿಸದೇ ಮತ್ತೆ ಆಸ್ಪತ್ರೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮದರಸಾ : ಮೂಲವನ್ನು ಬಹಿರಂಗಪಡಿಸುವಂತೆ ಸೂಚನೆ