ಪೋಕ್ಸೋ ಕೇಸ್ನಲ್ಲಿ ಮುರುಘಾ ಶರಣರ ಬಂಧನ ವಿಚಾರಕ್ಕೆ ಸಂಬಂಧಿಸಿ ಮುರುಘಾ ಸ್ವಾಮೀಜಿ ಪ್ರಕರಣದಲ್ಲಿ ಸಾಕ್ಷ್ಯನಾಶವಾಗಿದೆ. ಕೇಸ್ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಕೊಟ್ಟಂತಿದೆ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ
 
									
			
			 
 			
 
 			
					
			        							
								
																	
	 
	ಮಕ್ಕಳ ಹಾಸ್ಟೆಲ್ ಬೆಡ್ಶೀಟ್ಗಳೆಲ್ಲವೂ ಬದಲಾಗಿದೆ. ಒಡನಾಡಿಯ ಪರಶು ಸ್ಟ್ಯಾನ್ಲಿ ಅವರ ಕಾರ್ಯ ಶ್ಲಾಘನೀಯ. ಒಡನಾಡಿಯ ಪರಶು ಸ್ಟ್ಯಾನ್ಲಿಗೆ ಬೆದರಿಕೆ ಶುರುವಾಗಿದೆ. ಯಾವುದೇ ಆಮಿಷ, ಧಮ್ಕಿಗೆ ಹೆದರದೇ ಅವರು ಕೆಲಸ ಮಾಡಿದ್ದಾರೆ. ಆದರೆ ಕೇಸ್ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಕೊಟ್ಟಂತಿದೆ. ಶ್ರೀಗಳ ಕೇಸ್ನಲ್ಲಿ ಪೊಲೀಸರಿಂದ ಕರ್ತವ್ಯ ಲೋಪ ಆಗಿದೆ. ಕೇಸ್ ಸಂಬಂಧ ಚಿತ್ರದುರ್ಗ ಎಸ್ಪಿ ಅಮಾನತು ಮಾಡಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ
 
									
										
								
																	
	 
	 
	ಮಂತ್ರಿಗಳಿಗೆ ತಲೆ ಇದೆಯಾ? ಇವರೇನು ಜಡ್ಜ್ಗಳಾ? ಸ್ವಾಮೀಜಿ ಪರ ಮಾತನಾಡುವುದನ್ನು ಮೊದಲು ಬಂದ್ ಮಾಡಿ. ಸಚಿವರು, ಮಾಜಿ ಸಚಿವರಿಗೆ ಏನು ಬಂದಿದೆಯೋ ಗೊತ್ತಿಲ್ಲ. ಸ್ವಾಮೀಜಿ ಪರ ಮಾತನಾಡದಂತೆ ಕೇಂದ್ರ ನಾಯಕರ ಸೂಚನೆ ಇದೆ. ಸ್ವಾಮೀಜಿ ಮಠದ ಕುಲಕ್ಕೆ ಅವಮಾನ, ಸಂಸಾರಿಗಳೇ ಮಠಾಧೀಶರಾಗಲಿ. ನಮ್ಮಲ್ಲಿ ಸಾಕಷ್ಟು ಪೀಠಾಧಿಪತಿಗಳಿದ್ದಾರೆ, ಆದರೆ ಬ್ರಹ್ಮಚಾರಿಗಳಿಲ್ಲ. ಮಕ್ಕಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಾಮೀಜಿಗಳಿಂದ ಏನೂ ಆಗಿಲ್ಲ, ಸ್ವಾಮೀಜಿಯಿಂದ ನಾಡಿಗೆ ಕಂಟಕ ಎಂದು ಸ್ವಾಮೀಕಿ ಪರ ಮಾತನಾಡಿದ ಸಚಿವರ ವಿರುದ್ಧ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ಸರ್ಕಾರ ಮಠಕ್ಕೆ ಹಣ ಕೊಟ್ಟಿದ್ದು ಇದಕ್ಕೇನಾ? ಅಪ್ರಾಪ್ತ ಮಕ್ಕಳು ಸುಳ್ಳು ಹೇಳುವುದಿಲ್ಲ. ಮಕ್ಕಳು ಅಮಾಯಕರು ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಾಮಿಜಿಯಿಂದ ಆಗಿರುವ ಕಳಂಕವನ್ನು ತೊಳೆದುಕೊಳ್ಳಬೇಕು. ಪೊಲೀಸರಿಂದ ಕರ್ತವ್ಯ ಲೋಪವಾಗಿದೆ ಎಂದರು.
 
									
											
									
			        							
								
																	
	 
	ಜಗದ್ಗುರುಗಳು ಯಾರೂ ಇಲ್ಲ, ಎಲ್ಲರೂ ಜಾತಿ ಗುರುಗಳೇ ಇದ್ದಾರೆ. ಇವರಿಗೆ ತಮ್ಮ ಜಾತಿ, ಧರ್ಮ ಕಾಪಾಡುತ್ತೇ ಅನ್ನೋದೆ ಧೈರ್ಯ. ಆದರೆ ಇವರೆಲ್ಲರಿಗಿಂತ ಕಾನೂನು ದೊಡ್ಡದು. ಅಪರಾಧಿ ಪರ ಮಾತಾಡಿದವರನ್ನು ಪ್ರಕರಣದಲ್ಲಿ ಸೇರಿಸಬೇಕು. ಪೀಠಾಧಿಪತಿಗಳು ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ. ಇನ್ಮುಂದೆ ಮಠಗಳಿಗೆ ಸಂಸಾರಿಗಳೇ ಪೀಠಾಧಿಪತಿಯಾಗಲಿ. ಧರ್ಮಸ್ಥಳವೇ ಇದಕ್ಕೆ ಉದಾಹರಣೆಯಾಗಲಿ ಎಂದರು.
 
									
			                     
							
							
			        							
								
																	
	 
	ಇನ್ನು ಮತ್ತೊಂದು ಕಡೆ ಚಿತ್ರದುರ್ಗ ಮುರುಘಾ ಮಠದಲ್ಲಿ ಪೊಲೀಸರಿಂದ ಸ್ಥಳ ಮಹಜರು ಮಾಡಲಾಗುತ್ತಿದೆ. ಮುರುಘಾ ಶ್ರೀಗಳು ಕೂರುತ್ತಿದ್ದ ಕಚೇರಿಯಲ್ಲಿ, ಶ್ರೀಗಳ ಬೆಡ್ರೂಮ್ನಲ್ಲಿ ಮಹಜರು ಮಾಡಿಲಾಗುತ್ತಿದೆ. ಪ್ರಕರಣದ ತನಿಖಾಧಿಕಾರಿ DySP ಅನಿಲ್ ಕುಮಾರ್ ಹಾಗೂ ಎಸ್ಪಿ ಕೆ.ಪರಶುರಾಮ ನೇತೃತ್ವದಲ್ಲಿ ಮಹಜರು ಕಾರ್ಯ ನಡೆಯುತ್ತಿದೆ. ದರ್ಬಾರ್ ಹಾಲ್ನಲ್ಲಿಯೂ ಮುರುಘಾ ಶ್ರೀಗಳಿಂದ ಮಹಜರು ಮಾಡಿ ಸಾಕಷ್ಟು ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರ ಪ್ರಯತ್ನ ನಡೆಯುತ್ತಿದೆ. ಆದ್ರೆ ಪೊಲೀಸರ ಎಲ್ಲಾ ಪ್ರಶ್ನೆಗಳಿಗೂ ಮುರುಘಾಶ್ರೀಗಳು ಮೌನ ವಹಿಸಿದ್ದಾರೆ.