Select Your Language

Notifications

webdunia
webdunia
webdunia
webdunia

ಬಿಎಂಟಿಸಿಗೆ ಬಿಳಿ ಆನೆಯಾದ ವೋಲ್ವೋ ಬಸ್ ಗಳು..!

ಬಿಎಂಟಿಸಿಗೆ  ಬಿಳಿ ಆನೆಯಾದ ವೋಲ್ವೋ ಬಸ್ ಗಳು..!
bangalore , ಭಾನುವಾರ, 4 ಸೆಪ್ಟಂಬರ್ 2022 (19:26 IST)
ಕೊರೊನಾ ಯಾವಾಗ ವಕ್ಕರಿಸಿತೋ ಅಂದಿನಿಂದ BMTC ಎಸ್‌ಸಿ ಬಸ್‌ಗಳು ಮೂಲೆಗುಂಪಾಗಿವೆ. ಆದರೆ ಸದ್ಯ ಕರೋನ ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಬಂದು ನಿಂತಿದೆ. ಆದರೂ ನಿಗಮ ಕೋಟಿ ಕೋಟಿ ಖರ್ಚು ಮಾಡಿ ಎಸಿ ಬಸ್ ಗಳ ನಿರ್ವಹಣೆ ಮಾಡ್ತಿದೆ. ಇದು ನಿಗಮದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ.
 
ಕರೋನಾ ಈಗ ತಣ್ಣಗಾಗಿದ್ದು, ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಆದರೆ BMTC ವರಸೆ ಮಾತ್ರ ಬೇರೆಯೇ ಇದೆ. ಕೊರೋನಾದಿಂದ ಮುಗಿದರೂ ಬಿಎಂಟಿಸಿ ನಿಗಮಕ್ಕೆ ವಜ್ರ ಎಸಿ ಬಸ್‌ಗಳು ಪೂರ್ಣಪ್ರಮಾಣದಲ್ಲಿ ರಸ್ತೆಗೆ ಇಳಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡೂವರೆ ವರ್ಷದಿಂದ ಐನೂರಕ್ಕೂ ಹೆಚ್ಚಿನ ವಾಯು ವಜ್ರ ಎಸಿ ಬಸ್‌ಗಳು ನಿಂತಲ್ಲೇ ನಿಂತಿವೆ. ಬಿಎಂಟಿಸಿ ಬಳಿ ಒಟ್ಟು 780 ಎಸಿ ಬಸ್‌ಗಳಿವೆ. ಇದರಲ್ಲಿ ಸದ್ಯ ಆಪರೇಟ್ ಆಗ್ತಿರೋದು ಮಾತ್ರ 180 ಬಸ್ ಮಾತ್ರ. ಉಳಿದ 580 ಎಸ್‌ಸಿ ಬಸ್‌ಗಳು ನಿಗಮದ ಡಿಪೋದಲ್ಲೇ ತುಕ್ಕು ಹಿಡಿಯುತ್ತ ಬಿದ್ದಿವೆ.ಈ ಬಗ್ಗೆ ಮಾತನಾಡಿರುವ ನೌಕರರ ಸಂಘದ ಮುಖಂಡ ಆನಂದ್, ಬಿಎಂಟಿಸಿ ನಿಗಮದ ವಿರುದ್ಧ ಹರಿಹಾಯ್ದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗೆ ರಕ್ಷಣೆ ಕೊಡಬೇಕೆಂದು ಕಾಂಗ್ರೇಸ್ ಕಾರ್ಯಕರ್ತರ ಆಗ್ರಹ