Publish Date: Sun, 04 Sep 2022 (19:24 IST)
Updated Date: Sun, 04 Sep 2022 (19:26 IST)
ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ವೈಟ್ ಫೀಲ್ಡ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಶಾಸಕರು ಮಹಿಳೆಯ ಮೇಲೆ ದರ್ಪ ಮೆರೆದಿರುವುದರ ವಿರುದ್ಧ ಐವತ್ತಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.ಅಷ್ಟೇ ಅಲ್ಲದೆ ಕೂಡಲೇ ಮಹಿಳೆಯ ಮೇಲೆ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ಒತ್ತಾಯ ಮಾಡಿದ್ದಾರೆ.
ಇನ್ನು ರಾಜಕಾಲುವೆ ತೆರವು ಕಾರ್ಯಚರಣೆ ವೇಳೆ ಮಹಿಳೆ ಮೇಲೆ ಶಾಸಕರು ದರ್ಪ ತೋರಿಸಿದ್ದಾರೆ.ಇನ್ನು ಪೊಲೀಸರು ಕೂಡಲೇ ಮಹಿಳೆಗೆ ರಕ್ಷಣೆ ಕೊಡಬೇಕೆಂದು ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.