Select Your Language

Notifications

webdunia
webdunia
webdunia
webdunia

ಬಿಎಂಟಿಸಿ ರಜತ ಮಹೋತ್ಸವಕ್ಕೇ ಸಿಲಿಕಾನ್ ಸಿಟಿ ನಾಗರಿಕರಿಗೆ ಭರ್ಜರಿ ಗಿಫ್ಟ್

ಬಿಎಂಟಿಸಿ ರಜತ ಮಹೋತ್ಸವಕ್ಕೇ ಸಿಲಿಕಾನ್ ಸಿಟಿ ನಾಗರಿಕರಿಗೆ ಭರ್ಜರಿ ಗಿಫ್ಟ್
bangalore , ಗುರುವಾರ, 11 ಆಗಸ್ಟ್ 2022 (13:29 IST)
ಬಿಎಂಟಿಸಿಗೆ 25 ವರ್ಷದ ಆಚರಣೆ ಅಂಗವಾಗಿ ಹಾಗೂ ಆಮೃತ ಮಹೋತ್ಸವದ ಅಂಗವಾಗಿ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ನಾಗರಿಕರಿಗೆ 15 ರಂದು  ಉಚಿತ ಪ್ರಯಾಣಕ್ಕೆ ಸರ್ಕಾರ ಅನುಮತಿ ನೀಡಿದೆ.14ನೇ ತಾರೀಖು 300 ಎಲೆಕ್ಟ್ರಿಕ್ ಬಸ್ ಗಳ  ಪೈಕಿ 75 ಬಸ್ ಗಳಿಗೆ ಫ್ಲ್ಯಾಗ್ ಆಫ್  ಮಾಡಲಾಗುತ್ತೆ.
 
ವಾಯು ಮಾಲಿನ್ಯ ವಿಚಾರದಲ್ಲಿ ಸದಾ ಉಪಯುಕ್ತವಾದ ಎಲೆಕ್ಟ್ರಿಕ್ ಬಸ್ ನ್ನ ಸುರಕ್ಷಿತವಾಗಿ ಚಾಲನೆ ಮಾಡಿದ್ದಾರೆ.  ನಮ್ಮ ಸಿಬ್ಬಂದಿ ಕಳೆದ ವರ್ಷದಲ್ಲಿ ಚಿಕ್ಕ ಅಪಘಾತ ಆಗದಂತೆ ವಾಹನ ಚಾಲನೆ ಮಾಡಿದಾರೆ.ಅಂತಹ ಚಾಲಕ ಸಿಬ್ಬಂದಿಗೆ ಪದಕ ಸಮರ್ಪಣೆ ಮಾಡಲಾಗುತ್ತೆ.45 ವರ್ಷಕ್ಕೂ ಮೇಲ್ಪಟ್ಟ ನಮ್ಮ ಕಾರ್ಮಿಕರಿಗೆ ಜಯದೇವ ಆಸ್ಪತ್ರೆ ಯಲ್ಲಿ ಉಚಿತ ಚಿಕಿತ್ಸೆ ತಪಾಸಣೆ ಮಾಡಲಾಗುತ್ತೆ.ಪ್ರತೀ ನಿತ್ಯ ಸ್ವಲ್ಪ ಜನರನ್ನ ಆಸ್ಪತ್ರೆಗೆ  ಹಂತ ಹಂತವಾಗಿ ಕಳುಹಿಸಿ ಕೊಡಲಾಗುತ್ತದೆ .ಆರೋಗ್ಯ ವ್ಯತ್ಯಯ ಇದ್ದಲ್ಲಿ ಉಚಿತ ಚಿಕಿತ್ಸೆ ಕೊಡ್ತೀವಿ ಎಂದು ಬಿಎಂಟಿಸಿ ಸಂಸ್ಥೆ ಅಧ್ಯಕ್ಷ ನಂದೀಶ್ ರೆಡ್ದಿ, ಹೇಳಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಾಡಿನಲ್ಲೆಡೆ ರಕ್ಷಾಬಂಧನ ಹಬ್ಬದ ಸಂಭ್ರಮ- ರಕ್ಷಾಬಂಧನದ ಮಹತ್ವ ಇಲ್ಲಿದೆ ನೋಡಿ