Select Your Language

Notifications

webdunia
webdunia
webdunia
Thursday, 10 April 2025
webdunia

ಇಂದು ನಾಡಿನಲ್ಲೆಡೆ ರಕ್ಷಾಬಂಧನ ಹಬ್ಬದ ಸಂಭ್ರಮ- ರಕ್ಷಾಬಂಧನದ ಮಹತ್ವ ಇಲ್ಲಿದೆ ನೋಡಿ

Rakshabandhan festival is being celebrated across the country today
bangalore , ಗುರುವಾರ, 11 ಆಗಸ್ಟ್ 2022 (13:20 IST)
ನಮ್ಮ ಭಾರತದಲ್ಲಿ ರಕ್ಷಾಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇಂದು ನಾಡಿನೆಲ್ಲೆಡೆ ರಕ್ಷಾ ಬಂಧನ ಹಬ್ಬದ  ಸಂಭ್ರಮ. ರಕ್ಷಾಬಂಧನ ಹಿಂದೂಗಳ ಹಬ್ಬಗಳಲ್ಲಿ ಒಂದು. ಸಹೋದರ ಸಹೋದರಿಯರ ಪ್ರೀತಿ ವಾತ್ಸಲ್ಯ ಹಾಗೂ ರಕ್ಷಣೆಯ ಸಂಕೇತವಾಗಿ ದೇಶದಾದ್ಯಂತ ಈ ಹಬ್ಬವನನ್ನು ಆಚರಿಸಲಾಗುತ್ತದೆ.
 
 ರಕ್ಷಾ ಬಂಧನ ವನ್ನು ರಾಖಿ ಎಂತಲೂ ಕರೆಯುತ್ತಾರೆ. ಅಣ್ಣ ತಂಗಿ ಕೈಗೆ ರಾಖಿಯನ್ನು ಕಟ್ಟಿ ಸದಾ ನಿನ್ನ ರಕ್ಷಣೆಗೆ ನಾನಿರುವೆ ಎಂದು ಸಾರುವುದು ರಕ್ಷಾಬಂಧನ ಹಬ್ಬದ ವಿಶೇಷ, ಹಾಗೆಯೇ ತಂಗಿಯು ಅಣ್ಣನ ಕೈಗೆ ರಕ್ಷಾಬಂಧನವನ್ನು ಕಟ್ಟಿ ಅಣ್ಣನಿಂದ ಆಶೀರ್ವಾದವನ್ನು ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಹಾಗೆಯೇ ಇಬ್ಬರು ಪರಸ್ಪರ ಉಡುಗೊರೆಯನ್ನು ನೀಡುತ್ತಾರೆ. ರಕ್ಷಾ ಬಂಧನ ಎಂದರೆ ರಕ್ಷೆ ಎಂದರೆ ರಕ್ಷಣೆ ಹಾಗೂ ಬಂಧನ ಎಂದರೆ ಸಂಬಂಧ ಎಂಬ ಅರ್ಥವನ್ನು ನೀಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗಳಕ್ಕೆ ಬೇಸತ್ತು ಪತ್ನಿಯನ್ನೇ ಕೊಲ್ಲೋದಾ!